ದಕ್ಷಿಣ ಕನ್ನಡದಲ್ಲಿ ಡಿಎಚ್ಒ ಕಚೇರಿ ಸೀಲ್ಡೌನ್: ಜನರಲ್ಲಿ ಹೆಚ್ಚಿದ ಕೊರೊನಾ ಆತಂಕ - ಮಂಗಳೂರು ಕೊರೊನಾ ಪ್ರಕರಣ ಸುದ್ದಿ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿನ್ನೆ ಒಂದೇ ದಿನ ರ‍್ಯಾಂಡಮ್ ಟೆಸ್ಟ್ನಲ್ಲಿ 28 ಕೊರೊನಾ ಪ್ರಕರಣ ಪತ್ತೆಯಾಗಿದ್ದು, ಸಮುದಾಯಕ್ಕೆ ಸೋಂಕು ಹಬ್ಬಿದೆಯಾ ಎಂಬ ಆತಂಕ ಮೂಡಿಸಿದೆ. ಉಳ್ಳಾಲ ಭಾಗದಲ್ಲಿ ಸೋಂಕು ಹೆಚ್ಚಳವಾಗಿದ್ದು, ಈ ರ‍್ಯಾಂಡಮ್ ಟೆಸ್ಟ್ನಲ್ಲಿ 28 ಪ್ರಕರಣ ಪತ್ತೆಯಾಗಿದೆ. ಜೊತೆಗೆ ಉಳ್ಳಾದ ನಗರಸಭೆ ಕೌನ್ಸಿಲರ್ಗಳಿಬ್ಬರಿಗೆ ಕೊರೊನಾ ಕಾಣಿಸಿಕೊಂಡಿದೆ. ಅಷ್ಟು ಮಾತ್ರವಲ್ಲದೇ ಐಎಲ್ಐ ಪ್ರಕರಣ ದಿಂದ 28, 25 ಮಂದಿ ಕೊರೊನಾ ರೋಗಿಗಳ ಪ್ರಾಥಮಿಕ ಸಂಪರ್ಕದಿಂದ ಕೊರೊನಾ ದೃಢಪಟ್ಟಿದೆ. 13 ಮಂದಿ ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯಾಧಿಕಾರಿಗೆ ಕೊರೊನಾ ಕಾಣಿಸಿಕೊಂಡಿರುವ ಕಾರಣ ಡಿಎಚ್ಒ ಕಚೇರಿ ಸೀಲ್ ಡೌನ್ ಮಾಡಲಾಗಿದೆ. ಜಿಲ್ಲೆಯಲ್ಲಿ ಈವರೆಗೆ 1020 ಪ್ರಕರಣ ಪತ್ತೆಯಾಗಿದ್ದು, ಕೊರೊನಾ ಕುರಿತಂತೆ ನಮ್ಮ ಪ್ರತಿನಿಧಿ ನೀಡಿರುವ ವಾಕ್ ಥ್ರೂ ಇಲ್ಲಿದೆ..