'ನಾನು ಯಾವ ಟೆಸ್ಟೂ ಕೊಡೋದಿಲ್ಲ, ಫಿಟ್&ಫೈನ್ ಆಗಿದ್ದೀನಿ, ಬೇಕಾದ್ರೆ ನಿಮ್ಮ ಹೋಂ ಮಿನಿಸ್ಟರ್‌ನ ಕಳ್ಸಿ ಹೊತ್ಕೊಂಡು ಹೋಗ್ತೀನಿ' - ಬಿಜೆಪಿ ನಾಯಕರಿಂದ ಕೋವಿಡ್ ನಿಯಮ ಉಲ್ಲಂಘನೆ
ರಾಮನಗರ: ಏನ್ ಟೆಸ್ಟ್ ಕೊಡೋದು. ಅವರು ಬೇಕಾದ್ರೆ ಟೆಸ್ಟ್ ಮಾಡಿಸಿಕೊಳ್ಳಲಿ. ನಾನು ಫಿಟ್ ಆಂಡ್ ಫೈನ್ ಆಗಿದ್ದೀನಿ. ನೀವು ನನಗೆ ಒತ್ತಡ ಹೇರುವಂತಿಲ್ಲ. ನಾನು ಜನಪ್ರತಿನಿಧಿ. ನನಗೆ ಈ ನೆಲದ ಕಾನೂನು ಗೊತ್ತಿದೆ. ನಾನು ಪರ್ಫೆಕ್ಟ್ ಆಗಿದ್ದೀನಿ ಅಂತ ನಿಮ್ಮ ಹೋಂ ಮಿನಿಸ್ಟರ್‌ಗೆ ಹೇಳಿ. ಹೋಂ ಮಿನಿಸ್ಟರ್‌ಗೋ, ಹೆಲ್ತ್ ಮಿನಿಸ್ಟರ್‌ಗೋ ಚೀಫ್ ಮಿನಿಸ್ಟರ್‌ಗೋ ಹೆಲ್ತ್ ಹೆಚ್ಚು,ಕಡಿಮೆ ಆಗಿರ್ಬೋದು. ನಾನು ಯಾವ ಟೆಸ್ಟೂ ಕೊಡೋದಿಲ್ಲ, ನನಗೆ ಅದರ ಅವಶ್ಯಕತೆ ಇಲ್ಲ. ನಾನು 15 ಕಿಲೋ ಮೀಟರ್ ನಡ್ಕೊಂಡು ಬಂದಿದ್ದೀನಿ ಏನಾದ್ರೂ ಒಂಚೂರು ಜಗ್ಗೀದೀನಾ? ಬೇಕಾದ್ರೆ ಕಳ್ಸಿ ಹೋಂ ಮಿನಿಸ್ಟರ್‌ನಾ ಹೊತ್ಕೊಂಡು ಹೋಕ್ತೀನಿ ಎಂದು ಆರೋಗ್ಯ ವಿಚಾರಿಸಲು ಹಾಗು ಕೋವಿಡ್ ಪರೀಕ್ಷೆಗೆ ಮಾದರಿ ತೆಗೆದುಕೊಳ್ಳಲು ಆಗಮಿಸಿದ ಎಡಿಸಿ ಹಾಗೂ ಡಿಹೆಚ್ಒ ಅವರಿಗೆ ಡಿ.ಕೆ.ಶಿವಕುಮಾರ್ ಗದರಿದರು.