ಸಿಲಿಂಡರ್ ಕಳ್ಳತನದ ದೃಶ್ಯ ಸಿಸಿಟಿವಿಯಲ್ಲಿ ಸೆರೆ - ರಸ್ತೆಯಲ್ಲಿ ಸಿಲಿಂಡರ್ ಕಳ್ಳತನ
ಸಿಲಿಂಡರ್ ಕಳ್ಳತನ ಮಾಡುವ ಜಾಲವೊಂದು ನಗರದಲ್ಲಿ ಬೆಳಕಿಗೆ ಬಂದಿದ್ದು, ಸಿಸಿಟಿವಿಯಲ್ಲಿ ಖದೀಮರ ಕೃತ್ಯ ಸೆರೆಯಾಗಿವೆ. ಮನೆ ಮನೆಗೆ ಆಟೋದಲ್ಲಿ ಸಿಲಿಂಡರ್ಗಳನ್ನು ತುಂಬಿಕೊಂಡು ಸರಬರಾಜು ಮಾಡುವ ವೇಳೆ ಕಳ್ಳತನ ಮಾಡಲಾಗುತ್ತಿದೆ. ದ್ವಿಚಕ್ರ ವಾಹನಗಳಲ್ಲಿ ಬರುವ ಇಬ್ಬರು ಚೋರರು ವ್ಯವಸ್ಥಿತವಾಗಿ ಸಿಲಿಂಡರ್ಗಳನ್ನು ಹೊತ್ತೊಯ್ಯುತ್ತಿದ್ದಾರೆ. ನಗರದಲ್ಲಿ ಇದುವರೆಗೂ 17ಕ್ಕೂ ಹೆಚ್ಚು ಸಿಲಿಂಡರ್ಗಳು ಕಳ್ಳತನವಾಗಿವೆ ಎಂದು ತಿಳಿದು ಬಂದಿದೆ.