ಹಾಡುಹಗಲೇ ಬೆಲೆ ಬಾಳುವ ಸೈಕಲ್ಗಳನ್ನು ಕದ್ದು ಪರಾರಿ: ಸಿಸಿ ಕ್ಯಾಮೆರಾದಲ್ಲಿ ದೃಶ್ಯ ಸೆರೆ - ದಾವಣಗೆರೆ ಸೈಕಲ್ ಕಳ್ಳತನ
ದಾವಣಗೆರೆ: ಮನೆ ಮುಂದೆ ನಿಲ್ಲಿಸಿದ್ದ ಸೈಕಲ್ನ್ನು ಹುಡುಗರಿಬ್ಬರು ಹಾಡುಹಗಲೇ ಕಳ್ಳತನ ಮಾಡಿ ಪರಾರಿಯಾಗಿರುವ ಘಟನೆ ದಾವಣಗೆರೆ ನಗರದ ಎಸ್.ಎಸ್ ಬಡಾವಣೆಯಲ್ಲಿ ನಡೆದಿದೆ. ಸೈಕಲ್ ಕಳ್ಳತನ ಮಾಡುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇಬ್ಬರು ಹುಡುಗರು ಮೊದಲು ಒಂದು ಸುತ್ತು ರಸ್ತೆಯಲ್ಲಿ ಓಡಾಡಿ, ಬಳಿಕ ಯಾರೂ ಇಲ್ಲದನ್ನು ಗಮನಿಸಿ ಗೇಟ್ ತೆಗೆದು ಸೈಕಲ್ ಕದ್ದೊಯ್ದಿದ್ದಾರೆ. ಇವು ಬೆಲೆ ಬಾಳುವ ಸೈಕಲ್ಗಳು ಎನ್ನಲಾಗಿದ್ದು, ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ನಡೆದಿದೆ.