ಆರೋಗ್ಯ ಜಾಗೃತಿಗಾಗಿ ಹಾವೇರಿಯಲ್ಲಿ ಸೈಕಲೋತ್ಸವ, ಮ್ಯಾರಥಾನ್ - ಹಾವೇರಿಯಲ್ಲಿ ಆರೋಗ್ಯ ಜಾಗೃತಿ ಕಾರ್ಯಕ್ರಮ
ಹಾವೇರಿ: ಸಾರ್ವಜನಿಕರಲ್ಲಿ ಆರೋಗ್ಯ ಜಾಗೃತಿ ಮೂಡಿಸಲು ಸೈಕಲ್ ಕ್ಲಬ್ ವತಿಯಿಂದ ನಗರದಲ್ಲಿ ಸೈಕಲೋತ್ಸವ, ಸಾಮೂಹಿಕ ನಡಿಗೆ ಮತ್ತು ಮ್ಯಾರಥಾನ್ ಆಯೋಜಿಸಲಾಗಿತ್ತು. ಮುನ್ಸಿಪಲ್ ಮೈದಾನದಲ್ಲಿ ನಡೆದ ಸೈಕಲೋತ್ಸವಕ್ಕೆ ಹುಕ್ಕೇರಿ ಮಠದ ಸದಾಶಿವ ಸ್ವಾಮೀಜಿ ಮತ್ತು ಮ್ಯಾರಥಾನ್‌ಗೆ ಹಾವೇರಿ ಶಾಸಕ ನೆಹರು ಓಲೇಕಾರ್ ಚಾಲನೆ ನೀಡಿದರು. ಸೈಕಲ್ ಮತ್ತು ಮ್ಯಾರಥಾನ್ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ನಂತರ ಮುನ್ಸಿಪಲ್ ಮೈದಾನಕ್ಕೆ ಆಗಮಿಸುವ ಮೂಲಕ ವಿಜೇತರಿಗೆ ಪದಕ ವಿತರಿಸಲಾಯಿತು. ಈ ವೇಳೆ ಮಾತನಾಡಿದ ಶಾಸಕ ನೆಹರು ಓಲೇಕಾರ್, ಆರೋಗ್ಯವೇ ಭಾಗ್ಯ, ಎಲ್ಲರೂ ಸದೃಢ ಆರೋಗ್ಯ ಹೊಂದುವಂತೆ ತಿಳಿಸಿದರು. ಹುಕ್ಕೇರಿ ಮಠದ ಸದಾಶಿವ ಸ್ವಾಮೀಜಿ ಮಾತನಾಡಿ, ರೋಗಗಳು ಬಂದ ಮೇಲೆ ವ್ಯಾಯಾಮದ ಮೊರೆ ಹೋಗುವುದಕ್ಕಿಂತ ರೋಗ ಬರುವ ಮೊದಲೇ ವ್ಯಾಯಾಮದ ಕಡೆ ಯುವಜನತೆ ಮುಖಮಾಡುವಂತೆ ಕರೆ ನೀಡಿದರು.