ಕಾಫಿನಾಡಿನ ಜಿಲ್ಲಾ ಉತ್ಸವದಲ್ಲಿ ಕುಟುಂಬದವರೊಂದಿಗೆ ಸಿ.ಟಿ.ರವಿ ಸಖತ್ ಸ್ಟೆಪ್ಸ್
ಚಿಕ್ಕಮಗಳೂರು ಜಿಲ್ಲೆಯಲ್ಲಿ 20 ವರ್ಷಗಳ ನಂತರ ಜಿಲ್ಲಾ ಉತ್ಸವ ತುಂಬಾ ಅದ್ಧೂರಿಯಾಗಿ ನಡೆಯುತ್ತಿದೆ. ಮೂರು ದಿನಗಳ ಕಾಲ ಜಿಲ್ಲಾ ಉತ್ಸವ ನಡೆಯುತ್ತಿದ್ದು, ಮೊದಲ ದಿನ ನಡೆದ ಜಿಲ್ಲಾ ಉತ್ಸವ ಕಾರ್ಯಕ್ರಮದಲ್ಲಿ ತಮಟೆ ಸದ್ದಿಗೆ ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ. ರವಿ ಸ್ಟೇಪ್ ಹಾಕಿ ಎಲ್ಲರ ಗಮನ ಸೆಳೆದರು. ಎರಡನೇ ದಿನ ರಸಮಂಜರಿ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಈ ದಿನವೂ ಉತ್ಸವದಲ್ಲಿಯೂ ಸಿ.ಟಿ. ರವಿ ಕುಟುಂಬದ ಸದಸ್ಯರು ಸಖರ್ ಸ್ಟೇಪ್ ಹಾಕಿದ್ದಾರೆ. ಒಂದು ಕಡೆ ಜಿಲ್ಲಾ ಉಸ್ತುವಾರಿ ಸಚಿವ ಸಿನಿಮಾ ಹಾಡಿಗೆ ಹೆಜ್ಜೆ ಹಾಕಿದರೆ, ಅವರ ಪತ್ನಿ ಪಲ್ಲವಿ ಸಿ ಟಿ ರವಿ ಕೂಡ ಪತಿ ಜೊತೆ ಸೇರಿ ಸ್ಟೇಪ್ ಹಾಕಿದ್ದಾರೆ. ಇದನ್ನು ನೋಡಿದ ಅವರ ಎರಡನೇ ಮಗ ಕೂಡ ತಂದೆ ತಾಯಿಯ ಜೊತೆ ಕುಣಿದು ಕುಪ್ಪಳಿಸಿದ್ದಾನೆ. ಜೊತೆಗೆ ಅಧಿಕಾರಿಗಳು ಹಾಗೂ ಬಿಜೆಪಿ ಮುಖಂಡರು ಕುಣಿದು ಕುಪ್ಪಳಿಸಿದ್ದಾರೆ.