ಮೂರನೇ ಹಂತದ ಲಾಕ್ಡೌನ್ ಸಡಿಲಿಕೆ: ಬಾರ್ ಮುಂದೆ ಸಾಲಾಗಿ ನಿಂತ ಮದ್ಯಪ್ರಿಯರು - Hospete news
ಬಳ್ಳಾರಿ: ಲಾಕ್ಡೌನ್ ಸಡಿಲಿಕೆ ಹಿನ್ನೆಲೆಯಲ್ಲಿ ಜಿಲ್ಲೆಯ ಹೊಸಪೇಟೆ ತಾಲೂಕಿನ ಪಾಪಿನಾಯಕನಹಳ್ಳಿಯ ಬಾರ್ ಎದುರು ನೂರಾರು ಮಂದಿ ಮದ್ಯಪ್ರಿಯರು ಸಾಲುಸಾಲಾಗಿ ನಿಂತು ಮದ್ಯದ ಬಾಟಲ್ಗಳನ್ನ ಖರೀದಿಸಿದ್ರು. ಹೊಸಪೇಟೆ ತಾಲೂಕಿನ ಪಿ.ಕೆ. ಹಳ್ಳಿಯಲ್ಲಿ ಮದ್ಯದಂಗಡಿ ಮುಂದೆ ಅರ್ಧ ಕಿ.ಮೀ.ನಷ್ಟು ಸರತಿ ಸಾಲು ಕಂಡು ಬಂತು. ಮರಿಯಮ್ಮನಹಳ್ಳಿ ಮದ್ಯದಂಗಡಿ ಮುಂದೆ ಸಹ ದೊಡ್ಡ ಕ್ಯೂ ಸೃಷ್ಟಿಯಾಗಿತ್ತು. ನಗರದ ಎಸ್.ವಿ.ಕೆ. ಬಸ್ ನಿಲ್ದಾಣ ಬಳಿ ಎಂಎಸ್‌ಐಎಲ್ ಮದ್ಯದಂಗಡಿ ಮುಂಭಾಗ ಬಂಬುಗಳನ್ನು ಕಟ್ಟಲಾಗಿತ್ತು. ಅಲ್ಲದೇ, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕೆಂದು ಚೌಕಾಕಾರದ ಬಾಕ್ಸ್ ರಚನೆ ಮಾಡಲಾಗಿತ್ತು.