ವರುಣನ ಅಬ್ಬರಕ್ಕೆ ಬೆಳೆ ನಾಶ, ಕಂಗಾಲಾದ ರೈತರು: ಪ್ರತ್ಯಕ್ಷ ವರದಿ - ಕಲಬುರಗಿ ಬೆಳೆ ನಾಶ
ಕಲಬುರಗಿ : ಕಳೆದೊಂದು ವಾರದಿಂದ ನಿರಂತರವಾಗಿ ಸುರಿಯುತ್ತಿರುವ ವರುಣನ ಅಬ್ಬರಕ್ಕೆ ಜಿಲ್ಲೆಯ ರೈತರು ಹೈರಾಣಾಗಿದ್ದಾರೆ. ಸೊನ್ನ ಬ್ಯಾರೇಜ್ನಿಂದ ಭೀಮಾ ನದಿಗೆ 1 ಲಕ್ಷಕ್ಕೂ ಅಧಿಕ ಕ್ಯೂಸೆಕ್ ನೀರು ಹರಿ ಬಿಡಲಾಗಿದೆ. ಇದರಿಂದಾಗಿ ಅಫಜಲಪುರ, ಜೇವರ್ಗಿ, ಚಿತ್ತಾಪುರ ತಾಲೂಕಿನ ಭೀಮಾ ನದಿ ಪಾತ್ರದಲ್ಲಿ ಪ್ರವಾಹ ಉಂಟಾಗುತ್ತಿದ್ದು, ರೈತರ ಬೆಳೆಗಳು ನಾಶವಾಗಿವೆ.