ಮಳೆಗೆ ಅಪಾರ ಬೆಳೆ ಹಾನಿ: ಅಥಣಿ ರೈತರಿಗೆ ವಿಶೇಷ ಪ್ಯಾಕೆಜ್ಗಾಗಿ ಆಗ್ರಹ - Special Package for Athani Farmers
ಅಥಣಿ(ಬೆಳಗಾವಿ): ಜಿಲ್ಲೆಯ ಅಥಣಿ ತಾಲೂಕಿನಲ್ಲಿ ಬಿಡದೆ ಎರಡು ದಿನದಿಂದ ಮಳೆ ಸುರಿಯುತ್ತಿರುವ ಪರಿಣಾಮ ತಾಲೂಕಿನ ಜನತೆ ಪರದಾಡುವಂತಾಗಿದೆ. ಇನ್ನೂ ಆಗಾಗ ತಾಲೂಕಿನಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ರೈತರ ಜಮೀನಿನಲ್ಲಿ ಕೀಟಬಾಧೆ ಹೆಚ್ಚಾಗಿದೆ. ಒಂದೆಡೆ ದನಕರುಗಳಿಗೆ ಮೇವು ಇಲ್ಲದೆ ಜಾನುವಾರುಗಳು ಪರಿತಪಿಸುವಂತಾಗಿದೆ. ಹವಾಮಾನ ವೈಪರೀತ್ಯ ಹಾಗೂ ತುಂತುರು ಮಳೆಗೆ ದ್ರಾಕ್ಷಿ ಬೆಳೆ ಸಂಪೂರ್ಣ ಹಾನಿಯಾದೆ. ಕೊರೊನಾ, ಮಳೆಯಿಂದಾಗಿ ರೈತರಿಗೆ ಭಾರಿ ಪ್ರಮಾಣದಲ್ಲಿ ಬೆಳೆ ಹಾನಿ ಸಂಭವಿಸಿದ್ದು, ಅಥಣಿ ರೈತರಿಗೆ ವಿಶೇಷ ಪ್ಯಾಕೆಜ್ ಘೋಷಣೆ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ.