ಡವಗಿ ನಾಲೆಯಲ್ಲಿ ಪ್ರತ್ಯಕ್ಷವಾಯ್ತು ಜೋಡಿ ಮೊಸಳೆ: ಆತಂಕದಲ್ಲಿ ಜನ - ಅಳ್ನಾವರ ಪಟ್ಟಣದ ಡವಗಿ ನಾಲೆ
ಧಾರವಾಡ ಜಿಲ್ಲೆಯ ಅಳ್ನಾವರ ಪಟ್ಟಣದ ಡವಗಿ ನಾಲೆಯಲ್ಲಿ ಮೊಸಳೆಗಳು ಪ್ರತ್ಯಕ್ಷಗೊಂಡಿದ್ದು, ಜನರಲ್ಲಿ ಆತಂಕ ಮನೆಮಾಡಿದೆ.ಪಟ್ಟಣಕ್ಕೆ ಹೊಂದಿಕೊಂಡೆ ಇರುವ ಡವಗಿ ನಾಲೆಯಲ್ಲಿ ನಾಲೆ ನೀರು ಮುಂದೆ ಹೋಗಿ ಕಾಳಿ ನದಿಗೆ ಸೇರುವ ಹಿನ್ನಲೆ ನೀರಿನ ಪ್ರಮಾಣ ಹೆಚ್ಚಾದಾಗ ನಾಲೆಗೆ ಮೊಸಳೆಗಳು ಏರಿ ಬಂದಿವೆ ಎನ್ನಲಾಗಿದೆ.