ನದಿ ತೀರದ ಗ್ರಾಮಗಳಿಗೆ ಮಳೆ ಜೊತೆ ಜಲಚರಗಳ ಕಂಟಕ: ಮೊಸಳೆಗಳ ಕಾಟಕ್ಕೆ ಬೆಚ್ಚಿಬಿದ್ದ ಸಂತ್ರಸ್ತರು - ರಾಯಚೂರಿನ ಪ್ರವಾಹ ಪೀಡಿತ ಹಳ್ಳಿಗಳಲ್ಲಿ ಮೊಸಳೆಗಳ ಕಾಟ
ರಾಯಚೂರು: ಕೃಷ್ಣ ನದಿಯ ಪ್ರವಾಹದಿಂದಾಗಿ ನದಿ ತೀರದ ಗ್ರಾಮಗಳಿಗೆ ಜಲಚರಗಳ ಕಾಟ ಶುರುವಾಗಿದೆ. ರಾಯಚೂರು ತಾಲೂಕಿನ ಗುರ್ಜಾಪುರ ಗ್ರಾಮದ ನದಿಯ ದಂಡೆಯಲ್ಲಿ ಮೊಸಳೆಗಳು ಕಾಣಿಸಿಕೊಳ್ಳುತ್ತಿವೆ. ಗುರ್ಜಾಪುರ ಗ್ರಾಮದ ಬಳಿಯ ಬ್ರಿಡ್ಜ್ ಕಂ ಬ್ಯಾರೇಜ್ ಹತ್ತಿರ ಬೃಹತ್ ಗಾತ್ರದ ಮೊಸಳೆ ಕಂಡು ಬಂದಿದ್ದು, ಜನರು ಆತಂಕಕ್ಕೊಳಗಾಗಿದ್ದಾರೆ. ಮೊದಲೇ ಪ್ರವಾಹ ಭೀತಿಯಲ್ಲಿರುವ ನದಿ ತೀರದ ಪ್ರದೇಶದ ಜನಕ್ಕೆ ಮೊಸಳೆಗಳು ಹಾಗೂ ವಿಷ ಜಂತುಗಳ ಕಾಟ ಎದುರಾಗಿದೆ.