ಸಚಿವ ಆನಂದ ಸಿಂಗ್ ಬಂಗ್ಲೆ ಬಳಿ ಮೊಸಳೆ ಪ್ರತ್ಯಕ್ಷ..! - ಸಚಿವ ಆನಂದ ಸಿಂಗ್
ಹೊಸಪೇಟೆ: ಬೈಪಾಸ್ ನಲ್ಲಿನ ಅರಣ್ಯ ಸಚಿವ ಆನಂದ್ ಸಿಂಗ್ ಬಂಗ್ಲೆ ಬಳಿ ಮೊಸಳೆ ಪ್ರತ್ಯಕ್ಷವಾಗಿದ್ದು, ಕಮಲಾಪುರದ ಅಟಲ್ ವಾಜಪೇಯಿ ಝೂಲಾಜಿಕಲ್ ಪಾರ್ಕ್ ಸಿಬ್ಬಂದಿ ಮೊಸಳೆ ಸೆರೆ ಹಿಡಿದು ಅದೇ ಪಾರ್ಕಿಗೆ ಬಿಟ್ಟಿದ್ದಾರೆ. ಎಲ್ ಎಲ್ ಸಿ ಕಾಲುವೆಯ ಮುಂಭಾಗ ಸಚಿವರ ನಿವಾಸ ಬರುತ್ತದೆ. ಕಾಲುವೆ ನೀರಿನ ರಭಸಕ್ಕೆ ಮೊಸಳೆ ಬಂದಿರಬಹುದು ಎಂದು ಶಂಕಿಸಲಾಗಿದೆ.