ನಾರಾಯಣಪುರ ಜಲಾಶಯದ ಬಳಿ ಬೃಹತ್ ಗಾತ್ರದ ಮೊಸಳೆ ಪತ್ತೆ - ನಾರಾಯಣಪುರ ಜಲಾಶಯ ಲೆಟೆಸ್ಟ್ ನ್ಯೂಸ್
ರಾಯಚೂರು: ಜಿಲ್ಲೆಯ ಲಿಂಗಸುಗೂರು ತಾಲೂಕಿನ ನವಲಿ ಗ್ರಾಮದ ಬಳಿಯ ಕೃಷ್ಣ ನದಿ ಪಕ್ಕದಲ್ಲಿರುವ ಶ್ರೀಜಡಿಶಂಕರಲಿಂಗ ದೇವಾಲಯದಲ್ಲಿ ಮೊಸಳೆ ಪತ್ತೆಯಾಗಿದೆ. ನಾರಾಯಣಪುರ(ಬಸವಸಾಗರ) ಜಲಾಶಯದ ಹಿನ್ನೀರು ಪ್ರದೇಶದ ವ್ಯಾಪ್ತಿಯಲ್ಲಿ ಮೊಸಳೆ ಕಾಣಿಸಿಕೊಂಡಿದ್ದು, ದೇವಾಲಯಕ್ಕೆ ಬರುವ ಭಕ್ತರಿಗೆ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ. ಆಗಾಗ ಇದೇ ಸ್ಥಳದಲ್ಲಿ ಮೊಸಳೆ ಕಾಣಿಸಿಕೊಳ್ಳುತ್ತಿದ್ದು, ಆದಷ್ಟು ಬೇಗ ಮೊಸಳೆ ಸೆರೆ ಹಿಡಿಯಬೇಕೆಂದು ಭಕ್ತರು, ಗ್ರಾಮಸ್ಥರು ಆಗ್ರಹಿಸಿದ್ದಾರೆ.