ಮೊಸಳೆ ಬಂತು ಮೊಸಳೆ.. ದಾಂಡೇಲಿ ಬಳಿಯ ಗ್ರಾಮದಲ್ಲಿ Crocodile ನಿರ್ಭಯದ ನಡೆ! - Crocodile,
ಶಿರಸಿ: ಎಂದಿನಂತೆ ಮುಂಜಾನೆ ಎದ್ದು ದಿನನಿತ್ಯದ ಕಾರ್ಯಗಳಲ್ಲಿ ತೊಡಗಿದ ಜನರಿಗಿಂದು ಮೊಸಳೆ ದರ್ಶನವಾಗಿದೆ. ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯ ಕೊಗಿಲಬನ ಗ್ರಾಮದ ರಸ್ತೆಗೆ ಬೃಹದಾಕಾರದ ಮೊಸಳೆ ಎಂಟ್ರಿ ಕೊಟ್ಟಿದ್ದು ಗ್ರಾಮಸ್ಥರು ಒಂದು ಕ್ಷಣ ಬೆಚ್ಚಿಬಿದ್ದಿದ್ದಾರೆ. ಆದ್ರೆ ಯಾರೊಬ್ಬರಿಗೂ ತೊಂದರೆ ಕೊಡದೆ ಮೊಸಳೆ ನದಿಗೆ ಹಿಂದಿರುಗಿದೆ.