ಕರ್ನಾಟಕ

karnataka

ETV Bharat / videos

ಧಾರವಾಡದ ಕಾಲೇಜು ಆವರಣದಲ್ಲಿ ಮೊಸಳೆ ಪ್ರತ್ಯಕ್ಷ: ಬೆಚ್ಚಿಬಿದ್ದು ಓಡಿದ ವಿದ್ಯಾರ್ಥಿಗಳು! - ಮೊಸಳೆಯೊಂದು ಕಾಲೇಜ್​ವೊಂದರ ಆವರಣಕ್ಕೆ ನುಗ್ಗಿದೆ

By

Published : Feb 20, 2020, 5:04 PM IST

ಧಾರವಾಡ: ಮೊಸಳೆಯೊಂದು ಕಾಲೇಜೊಂದರ ಆವರಣಕ್ಕೆ ನುಗ್ಗಿದ್ದು, ಇದನ್ನು ಕಂಡ ವಿದ್ಯಾರ್ಥಿಗಳು ಓಡಿ ಹೋದ ಘಟನೆ ಅಳ್ನಾವರ ಪಟ್ಟಣದಲ್ಲಿ ನಡೆದಿದೆ. ಇಲ್ಲಿನ ಕಾಶೇನಟ್ಟಿ ರಸ್ತೆಯಲ್ಲಿರುವ ಸೆಂಟ್ ಥೆರೆಸಾ ಕಾಲೇಜಿ​ಗೆ ಮೊಸಳೆ ಹೇಗೋ ನುಸುಳಿ ಬಂದಿದೆ. ಇದನ್ನು ಕಂಡ ಕಾಲೇಜು ವಿದ್ಯಾರ್ಥಿಗಳು ಹೌಹಾರಿ ಓಡಿ ಹೋಗಿದ್ದಾರೆ. ವಿಷಯ ಕಾಲೇಜು ಆಡಳಿತ ಮಂಡಳಿಗೆ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆ ಗಮನಕ್ಕೆ ತಂದಿದ್ದಾರೆ. ಸ್ಥಳಕ್ಕೆ ಬಂದ ಅರಣ್ಯ ಇಲಾಖೆಯ ಸಿಬ್ಬಂದಿ ಸ್ಥಳೀಯರ ನೆರವಿನೊಂದಿಗೆ ಮೊಸಳೆ ಸೆರೆ ಹಿಡಿದ್ದಾರೆ. ಇನ್ನು ಈ ವರ್ಷದ ಮಳೆಗಾಲದಲ್ಲಿ ಡೌಗಿ ನಾಲೆ ತುಂಬಿ ಹರಿದ ಪರಿಣಾಮ ಅಳ್ನಾವರದಲ್ಲಿ ಆಗಾಗ ಮೊಸಳೆಗಳು ಕಾಣಿಸಿಕೊಳ್ಳುತ್ತಿವೆ.

ABOUT THE AUTHOR

...view details