ಬೃಹತ್ ಗ್ರಾತದ ಮೊಸಳೆ ಪ್ರತ್ಯಕ್ಷ: ಅಡಳ್ಳಟ್ಟಿ ಗ್ರಾಮದ ಜನರಲ್ಲಿ ಆತಂಕ! - athani crocodile news
ಅಥಣಿ: ಆಹಾರ ಅರಸಿ ಬಂದ ಬೃಹತ್ ಗ್ರಾತದ ಮೊಸಳೆ ಅಥಣಿ ತಾಲೂಕಿನ ಅಡಳ್ಳಟ್ಟಿ ಗ್ರಾಮದ ಜನರಲ್ಲಿ ಆತಂಕ ಮೂಡಿಸಿತ್ತು. ಕಳೆದ ರಾತ್ರಿ ಗ್ರಾಮದ ಒಳಗೆ 15 ಅಡಿಯ ಉದ್ದನೆಯ ಬೃಹತ್ ಗ್ರಾತದ ಮೊಸಳೆ ಪ್ರತ್ಯಕ್ಷವಾಯಿತು. ಸಮೀಪದಲ್ಲಿ ಯಾವುದೇ ನೀರಿನ ಮೂಲ ಇಲ್ಲದೆ ಇದ್ದರೂ ಬೃಹತ್ ಮೊಸಳೆ ಗ್ರಾಮಸ್ಥರಿಗೆ ಆಶ್ಚರ್ಯ ಮೂಡಿಸಿದೆ. ಗ್ರಾಮದ ಜನರು ಮೊಸಳೆಯನ್ನು ಕಟ್ಟಿಹಾಕಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ ಬೆನ್ನಲ್ಲೇ ಅಧಿಕಾರಿಗಳು ಮೊಸಳೆಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.