ನಾಡಿದಾದ್ಯಂತ ಕಳೆಗಟ್ಟಿದ ಕ್ರಿಸ್ಮಸ್ ಸಂಭ್ರಮ: ಕ್ರೈಸ್ತ ಬಾಂಧವರಿಂದ ಚರ್ಚ್ಗಳಲ್ಲಿ ವಿಶೇಷ ಪ್ರಾರ್ಥನೆ - ಕ್ರಿಸ್ಮಸ್ ಆಚರಣೆ-2020
ಬೆಂಗಳೂರು: ಕೊರೊನಾ ಭೀತಿಯ ನಡುವೆಯೂ ಕ್ರೈಸ್ತ ಬಾಂಧವರು ಕ್ರಿಸ್ಮಸ್ ಹಬ್ಬದ ಸಂಭ್ರಮದಲ್ಲಿದ್ದಾರೆ. ಬೆಂಗಳೂರು ನಗರದಲ್ಲಿ ಈ ಬಾರಿ ಸಾವಿರಾರು ಸಂಖ್ಯೆಯಲ್ಲಿ ಜನ ಸೇರದೇ, ತಮ್ಮ ತಮ್ಮ ಏರಿಯಾದ ಚರ್ಚ್ಗಳಲ್ಲಿ ಮೇಣದ ಬತ್ತಿ ಹಚ್ಚುವ ಮೂಲಕ ಸರಳವಾಗಿ ಪ್ರಾರ್ಥನೆ ಸಲ್ಲಿಸಿದರು. ಹಬ್ಬದ ಪ್ರಯುಕ್ತ ಶಿವಾಜಿನಗರದ ಪ್ರಸಿದ್ದ ಸೇಂಟ್ ಮೇರಿ ಬೆಸಿಲಿಕ ಚರ್ಚ್ ದೀಪಾಲಂಕಾರದಿಂದ ಕಂಗೊಳಿಸುತ್ತಿದ್ದು, ಕ್ರಿಸ್ಮಸ್ ಟ್ರೀ, ಸಾಂತಾ ಕ್ಲಾಸ್ ಪ್ರತಿಮೆ ನೋಡುಗರ ಮನ ಸೆಳೆಯುತ್ತಿದೆ.