ಲಾಕ್ಡೌನ್ ನಡುವೆ ತಪ್ಪಿಸಿಕೊಂಡ ಹಸು-ಕರು.... ಮನಮಿಡಿಯುವಂತಿದೆ ಈ ದೃಶ್ಯ - cow-and-calf-wandering-for-food-during-lockdown
ಕೊರೊನಾ ಲಾಕ್ ಡೌನ್ ನಡುವೆ ಮೂಕ ಪ್ರಾಣಿಗಳ ರೋಧನೆ ಹೇಳತೀರದಾಗಿದೆ. ಕರುವೊಂದು ತನ್ನ ತಾಯಿ ಆಕಳಿನಿಂದ ತಪ್ಪಿಸಿಕೊಂಡು ಪರದಾಡಿರೋ ಘಟನೆ ಗದಗ ನಗರದಲ್ಲಿ ನಡೆದಿದೆ. ಕರು ನೀರು ಕಂಡ ತಕ್ಷಣ ಬಾಯಾರಿಕೆ ನೀಗಿಸಿಕೊಳ್ಳಲು ಹೋಗಿ ತನ್ನ ತಾಯಿ ಹಸುವಿನಿಂದ ಬೇರ್ಪಟ್ಟಿದೆ. ನಂತರ ತನ್ನ ತಾಯಿಯನ್ನು ಹುಡುಕುತ್ತಾ ಮುಗ್ಧ ಕರು ಅಂಬಾ ಅಂಬಾ ಎಂದು ಅಲೆದಾಡಿದೆ. ಅಂಬಾ ಅಂಬಾ ಎನ್ನುವ ಆರ್ತನಾದದೊಂದಿಗೆ ತಾಯಿ ಆಕಳನ್ನು ಹುಡುಕುತ್ತಾ ಹೊರಟ ಕರುವು ಹಲವು ಗಂಟೆಗಳ ಕಾಲ ತನ್ನ ತಾಯಿಯನ್ನು ಹುಡುಕಿದೆ.ಅನಂತರ ಎಲ್ಲೋ ಇದ್ದ ತಾಯಿ ಆಕಳಿಗೆ ತನ್ನ ಕರುವಿನ ಅಳಲು ಕೇಳಿಸಿದೆ. ತಕ್ಷಣ ತನ್ನ ಕರೆಯ ಮೂಲಕ ಕರುವಿನ ಆಂತರ್ಯಕ್ಕೆ ಓಗೊಟ್ಟಿದೆ. ತಾಯಿ ಆಕಳಿನ ಧ್ವನಿ ಆಲಿಸಿ ಅದೇ ದಾರಿ ಹುಡುಕುತ್ತಾ ಹೊರಟ ಆಕಳ ಕರುವು ಕೊನೆಗೂ ತಾಯಿ ಆಕಳಿನ ಮಡಿಲು ಸೇರಿಕೊಂಡಿದೆ. ಸ್ಥಳೀಯರೊಬ್ಬರ ಮೊಬೈಲ್ ನಲ್ಲಿ ಈ ಅಪರೂಪದ ದೃಶ್ಯ ಸೆರೆಯಾಗಿದ್ದು,ಕೊರೊನಾ ಕಟ್ಟೆಚ್ಚರದಿಂದ ಮೂಕ ಪ್ರಾಣಿಗಳ ರೋಧನ ಪಡುತ್ತಿರುವುದಕ್ಕೆ ಸಾಕ್ಷಿಯಾಗಿದೆ.