ಕರ್ನಾಟಕ

karnataka

ETV Bharat / videos

‘ಕೋವಿಶೀಲ್ಡ್‌’ ಲಸಿಕೆಯ ಮೊದಲನೇ ಹಂತದ ಪರೀಕ್ಷೆ ಮೈಸೂರಿನಲ್ಲಿ ಆರಂಭ - vaccine testing

By

Published : Aug 29, 2020, 5:09 PM IST

ಮೈಸೂರು : ಸಂಶೋಧಿತ ‘ಕೋವಿಶೀಲ್ಡ್‌’ ಲಸಿಕೆಯ ಮೊದಲನೇ ಹಂತದ ಪ್ರಯೋಗವು ಮೈಸೂರಿನ ಜೆಎಸ್​ಎಸ್​ ಆಸ್ಪತ್ರೆಯಲ್ಲಿ ಆರಂಭವಾಗಿದ್ದು, ಐವರು ಸ್ವಯಂ ಸೇವಕರಿಗೆ ಲಸಿಕೆಯನ್ನು ಇಂದಿನಿಂದ ನೀಡಲಾಗುತ್ತದೆ ಎಂದು ಜೆಎಸ್​ಎಸ್​ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಕ್​ನ ಸಮಕುಲಾಧಿಪತಿ ಬಿ.ಸುರೇಶ್​ ಈಟಿವಿ ಭಾರತಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದರು. ಕೊರೊನಾಗೆ ಕಂಡು ಹಿಡಿದ ಲಸಿಕೆ ಇದಾಗಿದ್ದು ಮೊದಲ ಮಾನವ ಪ್ರಯೋಗವು ರಾಜ್ಯದ ಮೈಸೂರಿನಲ್ಲಿ ನಡೆಯುತ್ತಿದೆ. ಐವರು ಸ್ವಯಂ ಸೇವಕರ ಮೇಲೆ ಪ್ರಾಯೋಗಿಕವಾಗಿ ಫಸ್ಟ್ ಇಂಜೆಕ್ಷನ್ ​ಅನ್ನು ನೀಡುತ್ತಿದ್ದೇವೆ. ನವೆಂಬರ್ ಅಥವಾ ಡಿಸೆಂಬರ್​ ಅಂತ್ಯಕ್ಕೆ ಪ್ರಯೋಗದ ಫಲಿತಾಂಶ ಬರಲಿದೆ ಎಂದು ಅವರು ತಿಳಿಸಿದರು.

ABOUT THE AUTHOR

...view details