ತುಮಕೂರಲ್ಲಿ 24ಕ್ಕೇರಿದ ಸೋಂಕಿತರ ಸಂಖ್ಯೆ: 2,027 ಜನರ ಕ್ವಾರಂಟೈನ್ - ಕಂಟೇನ್ಮೆಂಟ್ ಝೋನ್
ತುಮಕೂರು ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ 24ಕ್ಕೆ ಏರಿಕೆಯಾಗಿದ್ದು, 2,027 ಜನರನ್ನು ಕ್ವಾರಂಟೈನ್ ಮಾಡಲಾಗಿದೆ. 74 ಜನರನ್ನು ಜಿಲ್ಲಾ ಆಸ್ಪತ್ರೆಯ ಐಸೋಲೇಷನ್ನಲ್ಲಿ ಇರಿಸಲಾಗಿದೆ. ಇದುವರೆಗೂ ಜಿಲ್ಲೆಯಾದ್ಯಂತ 8,405 ಜನರ ಸ್ಯಾಂಪಲ್ಗಳ ಪೈಕಿ 7,112 ಜನರ ವರದಿ ನೆಗೆಟಿವ್ ಎಂದು ಬಂದಿದೆ. ಇನ್ನೂ 1,231 ಜನರದ್ದು ಸ್ಯಾಂಪಲ್ ವರದಿ ಬರಬೇಕಿದೆ. 38 ಜನರ ಸ್ಯಾಂಪಲ್ ವರದಿಯನ್ನು ತಿರಸ್ಕರಿಸಿ ಪುನಃ ಪರೀಕ್ಷೆಗೆ ಕಳುಹಿಸಲಾಗಿದೆ. ಇಬ್ಬರು ಮೃತಪಟ್ಟಿದ್ದು, 13 ವರ್ಷದ ಬಾಲಕ ಸೇರಿ ಐವರು ಗುಣಮುಖರಾಗಿದ್ದಾರೆ. 17 ಮಂದಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
Last Updated : May 23, 2020, 2:25 PM IST