ಜನಜಂಗುಳಿಯಿಂದ ಕೂಡಿದ ಮಂಡ್ಯದ ಮಾರುಕಟ್ಟೆ ಪ್ರದೇಶ - mandya market news
ಮಂಡ್ಯ: ನಗರದ ಮಾರುಕಟ್ಟೆ ಜನಜಂಗುಳಿಯಿಂದ ಕೂಡಿದ್ದು, ಒಂದು ಗಂಟೆಗೂ ಹೆಚ್ಚು ಕಾಲ ಟ್ರಾಫಿಕ್ ಜಾಮ್ ಉಂಟಾದ ಪರಿಣಾಮ ಜನರು ಕೋವಿಡ್ ನಿಯಮಗಳನ್ನು ಗಾಳಿಗೆ ತೂರಿದ್ದಾರೆ. ಮಂಡ್ಯದ ಹೊಳಲು ಸರ್ಕಲ್ ಬಳಿ ಜನಜಂಗುಳಿಯಿಂದ ಕೂಡಿದ್ದು, ಇದರ ನಿಯಂತ್ರಣಕ್ಕೆ ಪೊಲೀಸರು ಮುಂದಾದರಲ್ಲದೆ ಮಾಸ್ಕ್ ಹಾಕದವರಿಗೆ ದಂಡ ವಿಧಿಸಿದ್ದಾರೆ. ದಿನೇ-ದಿನೆ ಕೋವಿಡ್ ಪ್ರಕರಣಗಳು ಏರುತ್ತಿದ್ದರೂ ಜನ ಮಾತ್ರ ಎಚ್ಚೆತ್ತುಕೊಂಡಿಲ್ಲ. ಈ ಕುರಿತು ನಮ್ಮ ಪ್ರತಿನಿಧಿ ನೀಡಿರುವ ಪ್ರತ್ಯಕ್ಷ ವರದಿ ಇಲ್ಲಿದೆ.