ಮಾಸ್ಕ್, ಸಾಮಾಜಿಕ ಅಂತರ ಮರೆತು ಭಂಡಾರದಲ್ಲಿ ಮಿಂದೆದ್ದ ಗ್ರಾಮಸ್ಥರು! - belagavi bhandara uthsav
ಬೆಳಗಾವಿ: ಕೋವಿಡ್ ನಿಯಮವನ್ನು ಗಾಳಿಗೆ ತೂರಿ ಗ್ರಾಮಸ್ಥರೇ ಅದ್ಧೂರಿ ಭಂಡಾರ ಉತ್ಸವ ನಡೆಸಿದ ಘಟನೆ ಜಿಲ್ಲೆಯ ಯರಗಟ್ಟಿ ತಾಲೂಕಿನ ಕಡಬಿ ಗ್ರಾಮದಲ್ಲಿ ನಡೆದಿದೆ. ವಿಜಯದಶಮಿ ಪ್ರಯುಕ್ತ ಬನ್ನಿ ಮುಡಿಯಲು ಬಂದ ದೇವರ ಪಲ್ಲಕ್ಕಿ ಕಳಿಸಿಕೊಡುವ ಕಾರ್ಯಕ್ರಮದಲ್ಲಿ ವೈಭವದ ಭಂಡಾರ ಉತ್ಸವ ನಡೆಸಲಾಗಿದೆ. ಬೆಳ್ಳೆಮ್ಮ, ವಿಠ್ಠಪ್ಪಜ್ಜ ದೇವರ ಪಲ್ಲಕ್ಕಿ ಕಳಿಸುವ ವೇಳೆ ಕೋವಿಡ್ ನಿಯಮವನ್ನು ಗಾಳಿಗೆ ತೂರಲಾಗಿದೆ. ಗ್ರಾಮ ದೇವಿ ದೇವಸ್ಥಾನದಿಂದ ಕಡಬಿ ಗ್ರಾಮದ ಹೊರವಲಯವರೆಗೆ ಭಂಡಾರ ಎರಚಲಾಯಿತು. ಭಂಡಾರದಲ್ಲಿ ಇಡೀ ಗ್ರಾಮಸ್ಥರು ಮಿಂದೆದ್ದರು. ಡೊಳ್ಳು ಬಾರಿಸಿ ಭಜನೆ ಮೇಳದೊಂದಿಗೆ ಅದ್ಧೂರಿ ಉತ್ಸವ ಜರುಗಿತು.