ಕೋವಿಡ್ ನಿಯಮ ಉಲ್ಲಂಘನೆ: ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರಿಂದ ಬೈಕ್ ರ‌್ಯಾಲಿ - Bike rally by BJP youth Morcha activists
ಯಾದಗಿರಿ: ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ನಗರದಲ್ಲಿ ಮಾಸ್ಕ್ ಇಲ್ಲದೆ, ಸಾಮಾಜಿಕ ಅಂತರವಿಲ್ಲದೇ ಯಾದಗಿರಿ ಪದವಿ ಕಾಲೇಜು ಬಳಿಯಿಂದ ಬೈಕ್ ರ‌್ಯಾಲಿ ನಡೆಸುವ ಮೂಲಕ ಸರ್ಕಾರದ ಕೋವಿಡ್ ನಿಯಮಗಳನ್ನು ಉಲ್ಲಂಘಿಸಿದರು. ನಗರದಲ್ಲಿ ಯುವ ಮೋರ್ಚಾ ಸಮಾವೇಶಕ್ಕೆ ಆಗಮಿಸಿದ ಯುವ ಮೋರ್ಚಾ ರಾಜ್ಯಾಧ್ಯಕ್ಷ ಡಾ. ಸಂದೀಪ್ ಕುಮಾರ್ ಸ್ವಾಗತಕ್ಕೆ ನಡೆದ ಬೈಕ್ ರ‌್ಯಾಲಿಯಲ್ಲಿ ಕಾರ್ಯಕರ್ತರು ಕೊರೊನಾ ನಿಯಮವನ್ನು ಗಾಳಿಗೆ ತೂರಿ ಆತಂಕ ಸೃಷ್ಟಿಸಿದರು. ವಿದ್ಯಾಮಂಗಲ ಕಾರ್ಯಾಲಯದವರೆಗೆ ಕಾರ್ಯಕರ್ತರಿಂದ ಬೈಕ್ ರ‌್ಯಾಲಿ ನಡೆಯಿತು. ಹೆಲ್ಮೆಟ್ ಇಲ್ಲದೆ ಒಂದೇ ಬೈಕ್ನಲ್ಲಿ ಮೂವರು ಪ್ರಯಾಣ ಮಾಡುವ ಮೂಲಕ ಸಂಚರ ನಿಯಮ ಕೂಡ ಉಲ್ಲಂಘಿಸಿದರು. ಇಷ್ಟೆಲ್ಲ ಅಜಾಗರೂಕತೆ ನಡೆದರೂ ಕೂಡ ಕಂಡೂ ಕಾಣದಂತೆ ಅಸಹಾಯಕರಾಗಿ ಪೊಲೀಸರು ನಿಂತಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.