ಸಕಾಲಕ್ಕೆ ಸಿಗದ ಆ್ಯಂಬುಲೆನ್ಸ್, ಬೆಡ್.. ಕೋವಿಡ್ ಸೋಂಕಿತ ಬಿಬಿಎಂಪಿ ಸಿಬ್ಬಂದಿ ಪರದಾಟ - COvid Infectded BBMP Staff do not got the bed
ಬೆಂಗಳೂರು : ನಗರದಲ್ಲಿ ಕೋವಿಡ್ ನಿಯಂತ್ರಣಕ್ಕೆ ಪಾಲಿಕೆ ಆಯುಕ್ತರನ್ನೇ ಬದಲಾಯಿಸಲಾಗಿದೆ. ಆದರೂ, ಪರಿಸ್ಥಿತಿ ಸುಧಾರಿಸಿಲ್ಲ. ವಾರ್ಡ್ಗಳಲ್ಲಿ ಸೋಂಕು ನಿವಾರಕ ಔಷಧಿ ಸಿಂಪಡಿಸುವ ಹಾಗೂ ಕಂಟೇನ್ಮೆಂಟ್ ಝೋನ್ಗಳ ಮೇಲುಸ್ತುವಾರಿ ನೋಡಿಕೊಳ್ಳುವ ಕೆಂಗೇರಿ ವಾರ್ಡ್ ವರ್ಕ್ ಇನ್ಸ್ಪೆಕ್ಟರ್ಗೆ ಕೊರೊನಾ ಸೋಂಕು ತಗುಲಿದೆ. ಆಸ್ಪತ್ರೆಗೆ ದಾಖಲಾಗಲು ಆ್ಯಂಬುಲೆನ್ಸ್, ಬೆಡ್ ಸಿಗದೆ ಪರದಾಡಬೇಕಾಯಿತು. ಕೊನೆಗೆ ಬೇರೆ ದಾರಿಯಿಲ್ಲದೆ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.