ಕೋವಿಡ್ ಹೊಡೆತಕ್ಕೆ ಸಿಲುಕಿದ ಬ್ಯೂಟಿ ಪಾರ್ಲರ್ ಉದ್ಯಮ.. ಪರಿಹಾರಕ್ಕೆ ಒತ್ತಾಯ
ಹುಬ್ಬಳ್ಳಿ: ಉಲ್ಬಣಗೊಂಡ ಮಹಾಮಾರಿಯನ್ನು ತಡೆಯಲು ಲಾಕ್ಡೌನ್ ಘೋಷಣೆಯಾದ ವೇಳೆ ಹಲವು ಕ್ಷೇತ್ರಗಳು ತತ್ತರಿಸಿ ಹೋಗಿದ್ದು, ಬ್ಯೂಟಿ ಪಾರ್ಲರ್ ಉದ್ಯಮ ನಂಬಿದವ್ರು ಕೂಡ ಸಂಕಷ್ಟಕ್ಕೊಳಗಾದರು. ಈಗ ಗ್ರಾಹಕರ ಸಂಖ್ಯೆ ಕಡಿಮೆ. ಜೊತೆಗೆ ಕಾರ್ಯಕ್ರಮಗಳು ಕೂಡ ಮೊದಲಿನಂತೆ ನಡೆಯುತ್ತಿಲ್ಲ. ಹಾಗಾಗಿ ಬ್ಯೂಟಿ ಪಾರ್ಲರ್ ಉದ್ಯೋಗ ಈಗಲೂ ನಷ್ಟದಲ್ಲೇ ನಡೆಯುತ್ತಿದ್ದು, ಪರಿಹಾರಕ್ಕೆ ಒತ್ತಾಯಿಸಿದ್ದಾರೆ.