ಶಾಲೆಗಳಿಗೂ ತಟ್ಟಿದ ಕೋವಿಡ್ ಎಫೆಕ್ಟ್ : ಮೈದಾನವನ್ನೇ ಗದ್ದೆಯಾಗಿ ಮಾರ್ಪಡಿಸಿದ ಪೋಷಕರು - ಜುಲೈ 4 ರಂದು ಗದ್ದೆಯಲ್ಲಿ ಪೈರು ನಾಟಿ ಮಾಡಲಿರುವ ಸ್ಥಳೀಯರು
🎬 Watch Now: Feature Video
ದಕ್ಷಿಣ ಕನ್ನಡ ಜಿಲ್ಲೆ ಇತ್ತೀಚಿನ ದಶಕಗಳಲ್ಲಿ ಅಡಕೆ, ರಬ್ಬರ್ ಬೆಳೆಗಳತ್ತ ವಾಲಿದ ಪರಿಣಾಮ ಭತ್ತದ ಬೇಸಾಯ ತುಂಬಾ ಕಡಿಮೆಯಾಗಿತ್ತು. ಈ ಬಾರಿ ಮಾತ್ರ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಕರೆಯಂತೆ ಹಡಿಲು (ಬಂಜರು) ಗದ್ದೆಗಳಿಗೆ ಜೀವ ನೀಡುವ ಕಾರ್ಯ ಸಮರೋಪಾದಿಯಲ್ಲಿ ನಡೆಯುತ್ತಿದೆ. ದೇವಸ್ಥಾನ, ಶಾಲೆ, ಸಂಘ-ಸಂಸ್ಥೆಗಳು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸೇರಿ ಹಳ್ಳಿಹಳ್ಳಿಯಲ್ಲೂ ಖಾಲಿ ಜಾಗದಲ್ಲಿ ಗದ್ದೆ ಮಾಡಲಾಗುತ್ತಿದ್ದು, ಜುಲೈ 4ರಂದು ಪೈರು ನಾಟಿ ಮಾಡಲಾಗುತ್ತದೆ.