ಗೆದ್ದೇ ಗೆಲ್ಲುವೆ ಎಂಬ ವಿಶ್ವಾಸ... 85ರ ಇಳಿವಯಸ್ಸಿನಲ್ಲೂ ಕೊರೊನಾ ಮಣಿಸಿ ಬಂದ ವೃದ್ಧ ದಂಪತಿ! - ವೃದ್ಧ ದಂಪತಿ
ಇಡೀ ಪ್ರಪಂಚವೇ ಕೊರೊನಾ ಮಹಾಮಾರಿಗೆ ತತ್ತರಿಸಿ ಹೋಗಿದೆ. ಆದರೆ ಹಾಸನದಲ್ಲಿ ವೃದ್ಧ ದಂಪತಿಗಳು ನೀವು ಧೈರ್ಯವಾಗಿದ್ರೆ ಕೊರೊನಾವನ್ನು ಮಣಿಸಿಬಹುದು ಎಂದು ಆತ್ಮವಿಶ್ವಾಸದ ಮಾತನ್ನಾಡಿದ್ದಾರೆ. ದಾಸರಕೊಪ್ಪಲು ನಿವಾಸಿಗಳಾದ ಜಯರಾಮ್ (85) ಮತ್ತು ಜಯಮ್ಮ(75) ದಂಪತಿಗೆ ಕಳೆದ 15 ದಿನಗಳ ಹಿಂದೆ ಕೊರೊನಾ ಪಾಸಿಟಿವ್ ಬಂದು ಆಸ್ಪತ್ರೆಗೆ ದಾಖಲಾಗಿದ್ದರು. ಇದೀಗ ಕೊರೊನಾ ಗೆದ್ದು ಬಂದಿರುವ ಹಿರಿಯರು ಗೆದ್ದೇ ಗೆಲ್ಲುತ್ತೇವೆ ಎಂಬ ನಂಬಿಕೆ ಇದ್ದಿದ್ದರಿಂದ ಕೊರೊನಾ ವಿರುದ್ಧ ಜಯ ಸಾಧಿಸಿದ್ದೇವೆ. ಕೋವಿಡ್ ಬಗ್ಗೆ ಯಾವುದೇ ಆತಂಕ ಬೇಡ. ಧೈರ್ಯವೇ ಮಖ್ಯ ಕಾರಣವೆಂದು 'ಈಟಿವಿ ಭಾರತ' ಮೂಲಕ ಕೋವಿಡ್ ಸೋಂಕಿತರಿಗೆ ಧೈರ್ಯ ತುಂಬಿದ್ದಾರೆ.