ನನಗೆ ಅರಿವಿದೆ, ನಿಮಗೇಕಿಲ್ಲ: ಬೆಳಗಾವಿಯಲ್ಲಿ ಮಾಸ್ಕ್ ಧರಿಸಿದ ಒಂಟೆ ಮೂಲಕ ಜನಜಾಗೃತಿ! - belgavi latest news
ಬೆಳಗಾವಿ: ಕೊರೊನಾದಿಂದ ರಕ್ಷಿಸಿಕೊಳ್ಳಲು ನಾನು ಮಾಸ್ಕ್ ಧರಿಸಿದ್ದೇನೆ. ಕೊರೊನಾ ಬಗ್ಗೆ ನನಗಿರುವ ಅರಿವು, ಪ್ರಜ್ಞಾವಂತ ನಾಗರಿಕರಾದ ನಿಮಗೇಕಿಲ್ಲ ಎಂದು ಕುಂದಾನಗರಿಯಲ್ಲಿ ಒಂಟೆಯೊಂದು ಹೀಗೆ ವಿಭಿನ್ನ ಸಂದೇಶ ರವಾನಿಸುವ ಮೂಲಕ ಜನರ ಗಮನ ಸೆಳೆಯುತ್ತಿದೆ. ಮಹಾಮಾರಿ ಕೊರೊನಾ ಕುರಿತು ಜಾಗೃತಿ ಮೂಡಿಸಲು ಮಹಾನಗರ ಪಾಲಿಕೆ ಅಧಿಕಾರಿಗಳು ಒಂಟೆಯನ್ನು ಬಳಸಿಕೊಂಡಿದ್ದಾರೆ. ಒಂಟೆಗೆ ಮಾಸ್ಕ್ ಹಾಕಿಸಿ ನಗರದ ಪ್ರಮುಖ ಪ್ರದೇಶಗಳಲ್ಲಿ ಜಾಥಾ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ.