ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿಂದು 36 ಕೇಂದ್ರಗಳಲ್ಲಿ 3,121 ಜನರಿಗೆ ಕೋವ್ಯಾಕ್ಸಿನ್ ಲಸಿಕೆ - ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಂತ ಕೋವ್ಯಾಕ್ಸಿನ್ ಲಸಿಕೆ ಅಭಿಯಾನ
ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆ ಸೇರಿದಂತೆ ಜಿಲ್ಲೆಯಾದ್ಯಂತ 36 ಕೇಂದ್ರಗಳಲ್ಲಿ 3121 ಫಲಾನುಭವಿಗಳಿಗೆ ಇಂದು ಕೋವ್ಯಾಕ್ಸಿನ್ ಲಸಿಕಾ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಬಾಗೇಪಲ್ಲಿಯಲ್ಲಿ 6 ಕೇಂದ್ರಗಳಲ್ಲಿ 468 ಫಲಾನುಭವಿಗಳಿಗೆ, ಚಿಕ್ಕಬಳ್ಳಾಪುರದಲ್ಲಿ 7 ಕೇಂದ್ರಗಳಲ್ಲಿ 700 ಫಲಾನುಭವಿಗಳಿಗೆ, ಚಿಂತಾಮಣಿಯಲ್ಲಿ 6 ಕೇಂದ್ರ 600 ಜನರಿಗೆ, ಗೌರಿಬಿದನೂರು 8 ಕೇಂದ್ರ 584 ಮಂದಿಗೆ, ಗುಡಿಬಂಡೆಯಲ್ಲಿ 3 ಕೇಂದ್ರ 275 ಫಲಾನುಭವಿಗಳಿಗೆ, ಶಿಡ್ಲಘಟ್ಟದಲ್ಲಿ 6 ಕೇಂದ್ರ 494 ಫಲಾನುಭವಿಗಳಿಗೆ ಲಸಿಕೆ ಹಾಕುವ ಅಭಿಯಾನ ಹಮ್ಮಿಕೊಳ್ಳಲಾಗಿದೆ.