ಬ್ಲೂ ಬಾಯ್ಸ್ಗೆ ಶುಭ ಹಾರೈಸಿದ ಕರಾವಳಿ ಬಾಯ್ಸ್ - undefined
ಕಾರವಾರ: ಇಂಗ್ಲೆಂಡ್ ನಲ್ಲಿ ನಡೆಯುತ್ತಿರುವ ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾರತ ತನ್ನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಇಂದು ಸೆಣಸಲಿದ್ದು, ಬ್ಲೂ ಬಾಯ್ಸ್ ತಂಡಕ್ಕೆ ಕರಾವಳಿಯ ಯುವಕರು ಶುಭ ಹಾರೈಸಿದ್ದಾರೆ. ಪ್ರಸಕ್ತ ವಿಶ್ವಕಪ್ ನಲ್ಲಿ ಮೂರು ಪಂದ್ಯಗಳನ್ನಾಡಿರುವ ಭಾರತ ಎರಡರಲ್ಲಿ ಗೆಲುವು ಸಾಧಿಸಿದರೇ ಒಂದು ಪಂದ್ಯ ಮಳೆಯಿಂದಾಗಿ ರದ್ದಾಗಿದೆ. ಆದರೆ, ಪಾಕಿಸ್ತಾನದ ವಿರುದ್ದ ಆರು ಪಂದ್ಯಗಳನ್ನಾಡಿರುವ ಭಾರತ 6 ರಲ್ಲಿಯೂ ವಿಜಯ ಸಾಧಿಸಿದ್ದು, ಈ ಪಂದ್ಯದಲ್ಲಿಯೂ ಕೂಡ ಗೆಲುವು ಸಾಧಿಸುವ ಬಗ್ಗೆ ಕರಾವಳಿಯ ಕ್ರೀಡಾಭಿಮಾನಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇನ್ನು ಪಂದ್ಯಕ್ಕೆ ಮಳೆ ಬಾರದಂತೆ ಬೇಡಿಕೊಂಡಿರುವ ಅಭಿಮಾನಿಗಳು ಮಹೇಂದ್ರ ಸಿಂಗ್ ದೋನಿ ಹಾಗೂ ವಿರಾಟ್ ಕೊಯ್ಲಿ ನೇತೃತ್ವದಲ್ಲಿ ಭಾರಿ ಅಂತರದ ಗೆಲುವು ಸಾಧಿಸಲಿದೆ ಎಂದು ಭಾರತ ತಂಡಕ್ಕೆ ವಿಶಿಷ್ಟ ರಿತಿಯಲ್ಲಿ ಶುಭ ಹಾರೈಸಿದ್ದಾರೆ.