ಚಿಕ್ಕಮಗಳೂರು ಮಹಿಳೆಗೆ ಕೊರೊನಾ ಶಂಕೆ..! ತೀವ್ರ ತಪಾಸಣೆ - Chikmagalur Coronavirus suspicious
ಚಿಕ್ಕಮಗಳೂರು: ಕಳೆದ ಆರು ದಿನಗಳ ಹಿಂದೆ ಸಿಂಗಾಪುರದಿಂದ ಚಿಕ್ಕಮಗಳೂರಿಗೆ ಆಗಮಿಸಿದ್ದ ಮಹಿಳೆಯಲ್ಲಿ ಕೊರೊನಾ ವೈರಸ್ ಶಂಕೆ ಇರಬಹುದು ಎಂದು ಮಹಿಳೆಯೇ ಸ್ವಯಂ ಪ್ರೇರಿತವಾಗಿ ಚಿಕ್ಕಮಗಳೂರಿನ ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿದ್ದು, ಆಕೆಯನ್ನು ಐಸೋಲೇಷನ್ ವಾರ್ಡ್ನಲ್ಲಿ ಇಟ್ಟು ಚಿಕಿತ್ಸೆ ನೀಡಲಾಗುತ್ತಿದೆ. 40 ವರ್ಷದ ಮಹಿಳೆಯಲ್ಲಿ ತೀವ್ರವಾದ ಜ್ವರ, ಕೆಮ್ಮು, ಶೀತ ಕಂಡು ಬಂದ ಹಿನ್ನೆಲೆ ಆಸ್ಪತ್ರೆಗೆ ಮಹಿಳೆ ದಾಖಲಾಗಿದ್ದು ಈಗಾಗಲೇ ಜಿಲ್ಲಾಸ್ಪತ್ರೆಯ ಸರ್ಜನ್ ಡಾ. ಕುಮಾರ್ ನಾಯಕ್ ಆಕೆಯ ತಪಾಸಣೆ ನಡೆಸಿದ್ದಾರೆ. ಈಗಾಗಲೇ ಆಕೆಯ ರಕ್ತದ ಮಾದರಿಯನ್ನು ಬೆಂಗಳೂರಿಗೆ ಕಳುಹಿಸಿ ಕೊಟ್ಟಿದ್ದು 48 ಗಂಟೆಗಳ ನಂತರ ಅದರ ವರದಿ ಬರಲಿದೆ. ಈ ಕುರಿತು ಜಿಲ್ಲಾಸ್ಪತ್ರೆಯ ಸರ್ಜನ್ ಡಾ. ಕುಮಾರ್ ನಾಯಕ್ ಅವರ ಜೊತೆ ನಡೆಸಿದ ಚಿಟ್ ಚಾಟ್ ಇಲ್ಲಿದೆ..