ಕೊರೊನಾ ವೈರಸ್ ಭೀತಿ: ಮಂಗಳೂರಿಗೆ ಆಗಮಿಸುವ ಹಡಗುಗಳಿಗೆ ನಿರ್ಬಂಧ - ಮಂಗಳೂರಿಗೆ ಆಗಮಿಸುವ ಹಡಗುಗಳಿಗೆ ನಿರ್ಬಂಧ
ಮಂಗಳೂರು: ಕೊರಾನಾ ವೈರಸ್ ಭೀತಿಯಿಂದ ಮಂಗಳೂರಿನ ಪಣಂಬೂರು ಬಂದರಿಗೆ ಆಗಮಿಸುವ ಎಲ್ಲ ವಿದೇಶಿ ಹಡಗುಗಳಿಗೆ ನಿರ್ಬಂಧ ಹೇರಲಾಗಿದೆ. ಈ ನಿರ್ಬಂಧ ಮಾರ್ಚ್ 31ರವರೆಗೆ ಜಾರಿಯಲ್ಲಿರುತ್ತದೆ. ಕೇಂದ್ರ ಸರ್ಕಾರದ ಆದೇಶದ ಮೇರೆಗೆ ಈ ನಿರ್ಬಂಧ ಹೇರಲಾಗಿದ್ದು, ಈ ಹಿನ್ನೆಲೆಯಲ್ಲಿ ವಿದೇಶದಿಂದ ಆಗಮಿಸುವ ಎಲ್ಲ ರೀತಿಯ ಹಡಗುಗಳಿಗೂ ನಿರ್ಬಂಧ ಹೇರಲಾಗಿದೆ. ನಾಳೆ ಎಂಎಸ್ಸಿ ಲಿರಿಕಾ ಎಂಬ ಐಷಾರಾಮಿ ಹಡಗು ಪಣಂಬೂರು ಬಂದರಿಗೆ ಆಗಮಿಸಲಿತ್ತು. ಆದರೆ, ಈ ನಿರ್ಬಂಧದ ಪರಿಣಾಮ ಆ ಹಡಗಿಗೂ ಬಂದರು ಪ್ರವೇಶಿಸಲು ನಿರ್ಬಂಧ ಹೇರಲಾಗಿದೆ.