ದೇಶಾದ್ಯಂತ ನಾಳೆ ಮದ್ಯದಂಗಡಿ ಓಪನ್; ಎಣ್ಣೆಪ್ರಿಯನಿಂದ ಅಂಗಡಿಯೆದುರು ಕಾಯಿ ಒಡೆದು ಪೂಜೆ - ಬಾರ್ ಅಂಗಡಿ ಓಪನ್
ಕೋಲಾರ: ನಾಳೆಯಿಂದ ಮೇ.17ರವರೆಗೆ ದೇಶದಲ್ಲಿ ಲಾಕ್ಡೌನ್ ವಿಸ್ತರಣೆಗೊಂಡಿದ್ದು, ಇದರ ಮಧ್ಯೆ ಎಲ್ಲ ಮೂರು ಝೋನ್ಗಳಲ್ಲಿ ಮದ್ಯದಂಗಡಿ ಓಪನ್ ಮಾಡಲು ಅವಕಾಶ ನೀಡಲಾಗಿದೆ. ಮದ್ಯದ ಅಂಗಡಿ ಓಪನ್ ಆಗುವುದರಿಂದ ಪುಲ್ ಖುಷಿಯಲ್ಲಿರುವ ಎಣ್ಣೆ ಪ್ರೀಯರು ಈಗಾಗಲೇ ಕ್ಯೂನಲ್ಲಿ ನಿಂತುಕೊಂಡಿದ್ದಾರೆ. ಇದರ ಮದ್ಯೆ ಅಂಗಡಿ ಬಾಗಿಲಿಗೆ ಮದ್ಯ ಪ್ರಿಯನೊಬ್ಬ ಮಂಗಳಾರತಿ ಮಾಡಿ, ಕಾಯಿ ಒಡೆದು ಪೂಜೆ ಮಾಡಿದ್ದಾನೆ. ಕೋಲಾರ ಜಿಲ್ಲೆ ಬಂಗಾರಪೇಟೆ ತಾಲ್ಲೂಕು ಬೂದಿಕೋಟೆ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಬೂದಿಕೋಟೆ ಗ್ರಾಮದಲ್ಲಿನ ಎಂಎಸ್ಐಎಲ್ ಶಾಪ್ಗೆ ಪೂಜೆ ಮಾಡಿದ್ದಾನೆ. ಇನ್ನು ಬೇತಮಂಗಲದಲ್ಲಿ ಮದ್ಯದ ಅಂಗಡಿಗೆ ಲೈಟಿಂಗ್ ಹಾಕಿಸಿ ಅಲಂಕಾರ ಮಾಡಿ ಓಪನ್ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ.