ಕರ್ನಾಟಕ

karnataka

ETV Bharat / videos

ಕೋವಿಡ್​-19 ಕಂಟಕ: ರಾಯಚೂರು ಎನ್​ಇಕೆಎಸ್​ಆರ್​ಟಿಸಿಗೆ ಕೋಟ್ಯಂತರ ರೂ. ನಷ್ಟ - Northeast Karnataka road transport buses canceled

🎬 Watch Now: Feature Video

By

Published : Mar 23, 2020, 7:43 PM IST

Updated : Mar 23, 2020, 8:55 PM IST

ರಾಯಚೂರು: ಕೊರೊನಾ‌ ಭೀತಿ ಹಿನ್ನೆಲೆ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆಯ ಬಸ್​​ಗಳ ಸಂಚಾರವನ್ನು ನಿಲ್ಲಿಸಲಾಗಿದ್ದು, ಕೋಟ್ಯಂತರ ರೂಪಾಯಿ ನಷ್ಟ ಉಂಟಾಗಿದೆ. ನಿತ್ಯ 590 ಬಸ್​ಗಳು ಸಂಚರಿಸುತ್ತಿದ್ದವು. ರಾಯಚೂರು ಜಿಲ್ಲೆಯಲ್ಲಿ ಒಂದು ದಿನ ಜನತಾ ಕರ್ಫ್ಯೂ ಮಾಡಿದ್ದರಿಂದ ಬರೋಬ್ಬರಿ ಸುಮಾರು 50 ಲಕ್ಷ ರೂಪಾಯಿ ನಷ್ಟವಾಗಿದೆ. ಅಲ್ಲದೇ ಇಂದು ಸಹ ಬಂದ್ ಮುಂದುವರೆದಿದ್ದು, ಮತ್ತೆ 50 ಲಕ್ಷ ರೂಪಾಯಿ ನಷ್ಟ ಅನುಭವಿಸುವಂತಾಗಿದೆ. ಶ್ರೀಶೈಲ ಜಾತ್ರೆ‌ ರದ್ದುಪಡಿಸಿದ್ದರಿಂದಲೂ ಕೋಟ್ಯಂತರ ರೂಪಾಯಿ ಆದಾಯಕ್ಕೆ ಕತ್ತರಿ ಬಿದ್ದಿದೆ. ಇದೀಗ ರಾಜ್ಯದಲ್ಲಿ 9 ಜಿಲ್ಲೆಗಳು ಲಾಕ್​​ಡೌನ್ ಆದ ಪರಿಣಾಮ ಶೇ.50 ರಷ್ಟು ನಷ್ಟ ಎದುರಿಸುವಂತ ಪರಿಸ್ಥಿತಿ ಇದೆ ಎಂದು ರಾಯಚೂರು ಎನ್​ಇಕೆಎಸ್​ಆರ್​ಟಿಸಿಯ ಜಿಲ್ಲಾಧಿಕಾರಿ ಎಂ.​ ವೆಂಕಟೇಶ್​ ಈಟಿವಿ ಭಾರತಕ್ಕೆ ಮಾಹಿತಿ ನೀಡಿದ್ದಾರೆ.
Last Updated : Mar 23, 2020, 8:55 PM IST

ABOUT THE AUTHOR

...view details