ಕೊರೊನಾ ನಿವಾರಣೆಗಾಗಿ ಆಂಜನೇಯ ದೇವಾಲಯದಲ್ಲಿ ಹೋಮ-ಹವನ - ಆನೇಕಲ್ನಲ್ಲಿ ಕೊರೊನಾ ಪೂಜೆ,
ಮನುಷ್ಯನ ಪ್ರಯತ್ನ ಕೈ ಮೀರಿದಾಗ ದೇವರ ಮೊರೆ ಹೋಗುವುದು ಸಹಜ. ಹೀಗಾಗಿ ಕೋವಿಡ್ ಎರಡನೇ ಅಲೆಗೆ ಜನ ತತ್ತರಿಸುತ್ತಿರುವ ಹೊತ್ತಿನಲ್ಲಿ ಆದಷ್ಟು ಬೇಗ ಕೊರೊನಾ ತೊಲಗಲಿ. ಎಲ್ಲೆಡೆ ಜನಸಾಮಾನ್ಯರು ಸಂತೋಷವಾಗಿರಲಿ ಎಂದು ಬೆಂಗಳೂರಿನ ಗೊಟ್ಟಿಗೆರೆ ಸಮೀಪದ ಕೆಂಬತ್ತಳ್ಳಿ ರಸ್ತೆಯ ಶ್ರೀ ಬಯಲು ದಕ್ಷಿಣ ಮುಖ ಆಂಜನೇಯಸ್ವಾಮಿ ದೇವಾಲಯದಲ್ಲಿ ಹೋಮ-ಹವನ ಮಾಡಲಾಯಿತು.