ಚೀನಾದಿಂದ ತಾಯ್ನಾಡಿಗೆ ಬಂದ ಯೋಗ ಶಿಕ್ಷಕ... ಕೊರೊನಾ ವೈರಸ್ ಬಗ್ಗೆ ಹೇಳಿದ್ದು ಹೀಗೆ! - Corona virus effect news,
ಚೀನಾ ದೇಶದಲ್ಲಿ ಕಾಣಿಸಿಕೊಂಡಿರುವ ಕೊರೋನಾ ವೈರಸ್ ಚೀನಿಯರ ಆತಂಕಕ್ಕೆ ಕಾರಣವಾಗಿದೆ. ಚೀನಾದಿಂದ ಬೇರೆ ದೇಶಕ್ಕೂ ಕೊರೊನಾ ವೈರಸ್ ಹರಡುತ್ತಿರುವುದು ವಿಶ್ವದೆಲ್ಲೆಡೆ ಭಯದ ವಾತಾವರಣ ಸೃಷ್ಟಿಸಿದೆ. ಚೀನಾದಿಂದ ಅನ್ಯದೇಶದ ಪ್ರಜೆಗಳನ್ನು ಹೊರಕಳಿಸುವ ಕೆಲಸ ನಡೆಯುತ್ತಿದೆ. ಅಲ್ಲಿನ ಜನರಿಗೆ ಯೋಗ ಕಲಿಸಲು ಭಾರತದಿಂದ 50ಕ್ಕೂ ಹೆಚ್ಚು ಜನರು ಚೀನಾ ದೇಶಕ್ಕೆ ತೆರಳಿದ್ದರು. ಹಾಗೆಯೇ ದೊಡ್ಡಬಳ್ಳಾಪುರದಿಂದ ಮೂವರು ಯೋಗ ಶಿಕ್ಷಕರು ಚೀನಾದಲ್ಲಿದ್ದರು. ಸದ್ಯ ಚೀನಾದಲ್ಲಿ ಕೊರೊನಾ ವೈರಸ್ ಭೀತಿಯನ್ನು ಎದುರಿಸಿ ತಾಯ್ನಾಡಿಗೆ ಮರಳಿದ್ದಾರೆ ಯೋಗ ಶಿಕ್ಷಕರಾದ ರಘು . ಈಟಿವಿ ಭಾರತ ಜೊತೆ ಮಾತನಾಡಿದ ಯೋಗ ಶಿಕ್ಷಕ ರಘು, ಚೀನಾದಲ್ಲಿ ಎದುರಿಸಿದ ಪರಿಸ್ಥಿತಿಯನ್ನ ಎಳೆಎಳೆಯಾಗಿ ಬಿಚ್ಚಿಟ್ಟರು.
Last Updated : Feb 5, 2020, 7:19 AM IST