ಮಂಡ್ಯದಲ್ಲಿ ವೇಗ ಪಡೆದ ಲಸಿಕೆ ವಿತರಣೆ.. ಏನಂತಾರೆ ಕೊರೊನಾ ವಾರಿಯರ್..? - ಮಂಡ್ಯ ಸುದ್ದಿ
ಮಂಡ್ಯ: ಕೊರೊನಾ ವಿರುದ್ಧದ ಹೋರಾಟದಲ್ಲಿ ಭಾರತ ಇದೀಗ ಲಸಿಕೆ ವಿರತಣೆ ಮಾಡುತ್ತಿದೆ. ಮೊದಲ ಹಂತದ ವಿತರಣೆಯ ಭಾಗವಾಗಿ ಕೊರೊನಾ ವಾರಿಯರ್ಸ್ಗೆ ಲಸಿಕೆ ನೀಡಲು ನಿರ್ಧರಿಸಲಾಗಿದೆ. ಇದುವರೆಗೆ ಮಂಡ್ಯ ಜಿಲ್ಲೆಯಾದ್ಯಂತ 3,556 ಜನರಿಗೆ ಲಸಿಕೆ ಹಾಕಲಾಗಿದೆ. ಇದರಲ್ಲಿ 11 ಜನರಿಗೆ ಸಣ್ಣ ಪ್ರಮಾಣದಲ್ಲಿ ಅಡ್ಡ ಪರಿಣಾಮ ಉಂಟಾಗಿದೆ. ಇನ್ನುಳಿದ ವಾರಿಯರ್ಸ್‌ಗಳಿಗೆ ಯಾವುದೇ ತೊಂದರೆಯಾಗಿಲ್ಲ. ನೋಂದಣಿ ಮಾಡಿಕೊಂಡ ಪ್ರತಿಯೊಬ್ಬ ಕೊರೊನಾ ವಾರಿಯರ್ಸ್ ಲಸಿಕೆ ಪಡೆಯಬಹುದು ಎಂದು ಕೊರೊನಾ ವಾರಿಯರ್ ಯಶೋಧ ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.