ಕರ್ನಾಟಕ

karnataka

ETV Bharat / videos

ಕೋವಿಡ್​-19 ಆತಂಕ: ದುಬೈನಲ್ಲಿದ್ದುಕೊಂಡೇ ಭಾರತೀಯರಿಗೆ ಒಳ್ಳೆಯ ಸಂದೇಶ ರವಾನಿಸಿದ್ಲು ಬಾಲಕಿ - ಮುಧೋಳ ತಾಲೂಕಿನ ಬಿಸನಾಳ ಗ್ರಾಮ

By

Published : Mar 26, 2020, 7:24 PM IST

ಬಾಗಲಕೋಟೆ/ದುಬೈ: ಕೊರೊನಾ ಸೋಂಕು ಹರಡುವ ಭೀತಿ ಹಿನ್ನೆಲೆ ದುಬೈನಲ್ಲಿದ್ದುಕೊಂಡೇ ಪುಟ್ಟ ಬಾಲಕಿಯೋರ್ವಳು ಭಾರತೀಯರಿಗೆ ಸಂದೇಶವನ್ನು ರವಾನಿಸಿದ್ದಾಳೆ. ಜಿಲ್ಲೆಯ ಮುಧೋಳ ತಾಲೂಕಿನ ಬಿಸನಾಳ ಗ್ರಾಮದ ಶ್ರೇಯಾ ಶಿರೋಳ ಎಂಬ ಬಾಲಕಿ ದುಬೈನಿಂದಲೇ ಕೊರೊನಾ ಬಗ್ಗೆ ಜಾಗೃತಿ ಮೂಡಿಸಿದ್ದಾಳೆ. ಅಲ್ಲದೇ ಪ್ರಧಾನಿ ಮೋದಿ ಮತ್ತು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಧನ್ಯವಾದ ತಿಳಿಸಿದ್ದಾಳೆ. ಸರ್ಕಾರ ಹೊರಡಿಸಿರುವ ಆದೇಶಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಬಾಲಕಿ ಮನವಿ ಮಾಡಿದ್ದಾಳೆ. ನಾನು ನಮ್ಮ ದೇಶಕ್ಕೆ ಸುರಕ್ಷಿತ ಸಮಯದಲ್ಲಿ ಮತ್ತೆ ಮರಳಿ ಬರುತ್ತೇನೆ. ಕೊರೊನಾ ವೈರಸ್ ಬಗ್ಗೆ ಮುನ್ನೆಚ್ಚರಿಕೆ ವಹಿಸಿ, ಈ ರೋಗ ಹರಡುವ ಬಗ್ಗೆ ನಿರ್ಲಕ್ಷ್ಯ ಮಾಡದಿರಿ. ನಾನು ವಿಮಾನ ಮೂಲಕ ಭಾರತಕ್ಕೆ ಆಗಮಿಸಿದ್ರೆ, ನನ್ನಿಂದ ಕೊರೊನಾ ವೈರಸ್ ಹರಡಬಹುದು. ಹಾಗಾಗಿ ನಾನು ಸದ್ಯಕ್ಕೆ ಇಲ್ಲಿಯೇ ಸುರಕ್ಷಿತವಾಗಿದ್ದೇನೆ. ನೀವೂ ಸಹ ಭಾರತದಲ್ಲಿ ಸುರಕ್ಷಿತವಾಗಿರಿ ಎಂದು ಬಾಲಕಿ ಹೇಳಿದ್ದಾಳೆ. ಆಕೆಯ ಬುದ್ಧಿವಂತಿಕೆಯ ಮಾತುಗಳಿಗೆ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

ABOUT THE AUTHOR

...view details