ಕರ್ನಾಟಕ

karnataka

ETV Bharat / videos

ಪಾದರಾಯನಪುರ ಸೋಂಕಿತರನ್ನು ಕರೆತರುವ ಕೆಎಸ್​ಆರ್​ಟಿಸಿ ಸಿಬ್ಬಂದಿಗೆ ಪಿಪಿಇ ಕಿಟ್​ - ಪಾದರಾಯನಪುರ ಸೋಂಕಿತರು

By

Published : Apr 24, 2020, 12:53 PM IST

Updated : Apr 24, 2020, 3:23 PM IST

ಪಾದರಾಯನಪುರ ಆರೋಪಿಗಳನ್ನು ಬೆಂಗಳೂರಿಗೆ ಶಿಫ್ಟ್​ ಮಾಡುತ್ತಿರುವ ಹಿನ್ನಲೆ ಕೆಎಸ್​ಆರ್​ಟಿಸಿ ಸಿಬ್ಬಂದಿಯಿಂದ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಒಂದೇ ಬ್ಯಾರಕ್​​ನಲ್ಲಿ 22 ಮಂದಿ ಆರೋಪಿಗಳನ್ನು ಇಡಲಾಗಿದ್ದು, ಅವರಲ್ಲಿ 5 ಮಂದಿಗೆ ಪಾಸಿಟಿವ್ ದೃಢಪಟ್ಟಿದೆ. ಇನ್ನುಳಿದ 17 ಮಂದಿಗೂ ಕೂಡಾ ಸೋಂಕು ತಗಲಿರುವ ಶಂಕೆ ವ್ಯಕ್ತವಾಗಿದೆ. ಬಸ್​ನಲ್ಲಿ ಆರೋಪಿಗಳನ್ನು ಕರೆದೊಯ್ಯುವ ವೇಳೆ ಆರೋಪಿಗಳು ಚಾಲಕನ‌ ಬಳಿ ಬರಬಾರದು ಎಂದು ಬಸ್ ಚಾಲಕನ ಸೀಟ್ ಹಿಂಭಾಗದಲ್ಲಿ ಹಗ್ಗ ಕಟ್ಟಲಾಗಿದೆ. ಜೊತೆಗೆ ಆರೋಪಿಗಳನ್ನ ಕರೆದುಕೊಂಡು ಹೋಗುವ ಸಿಬ್ಬಂದಿ ಮುಂಜಾಗ್ರತಾ ಕ್ರಮವಾಗಿ ಪಿಪಿಇ ಕಿಟ್ ನೀಡಲಾಗಿದೆ. ಇನ್ನೂ, ಜೈಲಿನಲ್ಲಿ ಕ್ವಾರಂಟೈನ್ ವೇಳೆ 15ಕ್ಕೂ ಹೆಚ್ಚು ‌ನಗರಸಭೆ ಸಿಬ್ಬಂದಿ ಭೇಟಿ ನೀಡಿ ಮಾಸ್ಕ್, ಸ್ಯಾನಿಟೈಜರ್, ವಿತರಿಸಿದ್ದರು. ಸದ್ಯ ಅವರೆಲ್ಲರನ್ನೂ ಕೂಡಾ ಪರಿಶೀಲಿಸಲಾಗುತ್ತಿದೆ. ಸದ್ಯ ಗಂಟಲು ದ್ರವ ಮತ್ತು ರಕ್ತದ ಸ್ಯಾಂಪಲ್ ಅನ್ನು ಬೆಂಗಳೂರಿಗೆ ಕಳುಹಿಸಲಾಗಿದೆ.
Last Updated : Apr 24, 2020, 3:23 PM IST

ABOUT THE AUTHOR

...view details