ಕೊರೊನಾ ನಿಯಮ ಉಲ್ಲಂಘನೆ: ಮೈಸೂರಿನಲ್ಲಿ ಒಂದೇ ದಿನದಲ್ಲಿ ಬರೋಬ್ಬರಿ 2,49,850 ರೂ. ದಂಡ ವಸೂಲಿ - Corona rule violation in mysore
ಮೈಸೂರು: ಮಾಸ್ಕ್ ಕಾರ್ಯಾಚರಣೆಗೆ ವಿಶೇಷ ತಂಡ ರಚನೆ ಮಾಡಲಾಗಿದ್ದು, ಮಾಸ್ಕ್ ಇಲ್ಲ ಅಂದ್ರೆ ದಂಡ ಹಾಕಲಾಗುವುದು. ಮಾಸ್ಕ್ ಇಲ್ಲದೇ ಓಡಾಟ ಮಾಡಿದ ವ್ಯಕ್ತಿಗಳ ವಿರುದ್ಧ ಒಂದೇ ದಿನದಲ್ಲಿ 1,494 ಕೇಸ್ ದಾಖಲು ಮಾಡಲಾಗಿದೆ. ಅಲ್ಲದೇ ಒಂದೇ ದಿನದಲ್ಲಿ 2,49,850 ರೂ. ದಂಡ ವಸೂಲಿ ಮಾಡಲಾಗಿದೆ. ಕೊರೊನಾ ನಿಯಮ ಉಲ್ಲಂಘನೆ ಮಾಡಿದ ಹಿನ್ನೆಲೆಯಲ್ಲಿ ಮೈಸೂರು ನಗರದಲ್ಲಿ 51,099 ಪ್ರಕರಣಗಳು ದಾಖಲಾಗಿವೆ.