ಕೊರೊನಾ ಭೀತಿ... ಧಾರವಾಡದಲ್ಲಿ ಪೊಲೀಸರಿಂದ ಜಾಗೃತಿ - ಜಿಲ್ಲಾಡಳಿತದ ಹೈ ಅಲರ್ಟ್ ಘೋಷಣೆ
ಧಾರವಾಡದಲ್ಲಿ ಕೊರೊನಾ ವೈರಸ್ ಸೋಂಕು ದೃಢಪಟ್ಟ ಹಿನ್ನೆಲೆ ಜಿಲ್ಲೆಯನ್ನ ಲಾಕ್ ಡೌನ್ ಮಾಡಲಾಗಿದೆ. ಆದ್ರೂ ನಗರದಲ್ಲಿ ಜನಜೀವನ ಸಹಜ ಸ್ಥಿತಿಯಲ್ಲಿದೆ. ಜಿಲ್ಲಾಡಳಿತ ಹೈ ಅಲರ್ಟ್ ಘೋಷಣೆ ಮಾಡಿದರೂ ಜನರು ಓಡಾಡುವುದು, ಗುಂಪು ಸೇರುವುದು ಮಾತ್ರ ನಿಂತಿಲ್ಲ. ಹೀಗಾಗಿ ಕೊರೊನಾ ವೈರಸ್ ಬಗ್ಗೆ ಜಾಗೃತಿ ಮೂಡಿಸಲು ಹುಬ್ಬಳ್ಳಿಯ ಪೊಲೀಸರು ಮುಂದಾಗಿದ್ದಾರೆ.