ಕೊರೊನಾ ವೈರಸ್ ಭೀತಿ.. ಬಿಕೋ ಎನ್ನುತ್ತಿದೆ ಹಾವೇರಿ ಬಸ್ ನಿಲ್ದಾಣ - ಬಿಕೋ ಎನ್ನುತ್ತಿವೆ ಬಸ್ ನಿಲ್ದಾನಗಳು
ಕೊರೊನಾ ಸೋಂಕು ಹರಡುವ ಭೀತಿ ಹಿನ್ನೆಲೆ ಹಾವೇರಿಯಲ್ಲಿ ಇಂದು ಸಹ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಸರ್ಕಾರಿ ಬಸ್ ಗಳನ್ನು ಸಂಪೂರ್ಣ ಬಂದ್ ಮಾಡಲಾಗಿದೆ. ಬಸ್ಗಳು ಬಂದ್ ಆಗಿದ್ದರಿಂದ ಬಸ್ ನಿಲ್ದಾಣ ಬಿಕೋ ಎನ್ನುತ್ತಿವೆ,ಉಳಿದಂತೆ ಖಾಸಗಿ ವಾಹನಗಳು, ಆಟೋ ರಿಕ್ಷಾಗಳು ಎಂದಿನಂತೆ ರಸ್ತೆಗಳಿದು ಓಡಾಡ್ತಿವೆ. ಅಂಗಡಿ ಮುಂಗಟ್ಟುಗಳು ಎಂದಿನಂತೆ ಓಪನ್ ಆಗಿದ್ದು, ಜನ ಜೀವನ ಎಂದಿನಂತಿದೆ. ಸರಕಾರಿ ಬಸ್ ಗಳು ಬಂದ್ ಆಗಿದ್ದರಿಂದ ಬಸ್ ನಿಲ್ದಾಣಕ್ಕೆ ಬಂದ ಕೆಲವು ಜನ ಪ್ರಯಾಣಿಕರು ಖಾಸಗಿ ವಾಹನಗಳ ಮೊರೆ ಹೋಗ್ತಿದ್ದಾರೆ.