ಬೆಳಗಾವಿ ಲಾಕ್‌ಡೌನ್ ಅಗತ್ಯ ವಸ್ತುಗಳ ಖರೀದಿಗೆ ಮುಗಿಬಿದ್ದ ಜನ.. - belgavi latest news
ಕೊರೊನಾ ಹೆಚ್ಚುತ್ತಿರುವ ಭೀತಿಯಿಂದಾಗಿ ರಾಜ್ಯ ಸರ್ಕಾರ ಬೆಳಗಾವಿ ಸೇರಿ 9 ಜಿಲ್ಲೆಗಳನ್ನ ಮಾ. 31ರವರೆಗೂ ಲಾಕ್‌ಡೌನ್‌ಗೆ ಆದೇಶಿಸಿದೆ. ಇದರಿಂದಾಗ ತರಕಾರಿ ಮಾರುಕಟ್ಟೆ ಸೇರಿ ಇತರೆಡೆಗಳಲ್ಲಿ ಸಾರ್ವಜನಿಕರು ಅಗತ್ಯ ವಸ್ತುಗಳನ್ನು ತೆಗೆದುಕೊಳ್ಳಲು ಮುಗಿಬಿದ್ದರು. ವ್ಯಾಪಾರಿಗಳ ನಿತ್ಯದ ವಹಿವಾಟು ಕಡಿಮೆಯಾಗಿದೆ. ಜನ ಹೊರ ಬರಲು ಹೆದರುವಂತ ಸ್ಥಿತಿ ನಿರ್ಮಾಣವಾಗಿದೆ. ಜನರಿಂದಾಗಿ ಸದಾ ಗಿಜುಗುಡುತ್ತಿದ್ದ ಮಾರುಕಟ್ಟೆಯಲ್ಲಿ ಈಗ ಜನಸಂಖ್ಯೆ ಕಡಿಮೆಯಾಗಿದೆ.