ಕರ್ನಾಟಕ

karnataka

ETV Bharat / videos

ಮದುವೆ, ಹಬ್ಬ, ಜಾತ್ರೆಗಳಿಂದಲೇ ಕೊರೊನಾ ಕೇಸ್‌ ಹೆಚ್ಚುತ್ತಿವೆ : ಮಂಡ್ಯ ಡಿಹೆಚ್‌ಒ - ಕೊರೊನಾ ಹಾಟ್ ಸ್ಪಾಟ್

By

Published : Apr 16, 2021, 9:32 PM IST

ಮಂಡ್ಯ : ಮದುವೆ, ಹಬ್ಬ, ಜಾತ್ರೆಗಳಿಂದ ಮಂಡ್ಯಕ್ಕೆ ಸಂಕಷ್ಟ ಎದುರಾಗಿ ಕೋವಿಡ್ ಮಹಾಮಾರಿ ಹೆಚ್ಚುತ್ತಿದೆ ಎಂದು ಡಿಹೆಚ್‌ಒ ಮಂಚೇಗೌಡ ಆತಂಕ ವ್ಯಕ್ತಪಡಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾಲು ಸಾಲು ಹಬ್ಬಗಳೇ ಮಹಾಮಾರಿಗೆ ಸೂಕ್ತ ವೇದಿಕೆ. ಈಗಾಗಲೇ ನಿನ್ನೆ ಒಂದೇ ದಿನ 211 ಕೇಸ್ ದಾಖಲಾಗಿವೆ. ಇಂದು ಕೂಡ ಶತಕದಾಟುವ ಸಾಧ್ಯತೆ ಇದೆ ಎಂದರು. ಮದುವೆ, ಹಬ್ಬ, ಜಾತ್ರೆಗಳಿಂದಲೇ ಕೊರೊನಾ ಹರಡುತ್ತಿದೆ. ಪಾಸಿಟಿವ್ ಕೇಸ್ ಬಂದವರಲ್ಲಿ ಹೆಚ್ಚು ಜನ ಹಬ್ಬ, ಮದುವೆ, ಜಾತ್ರೆಗಳಿಗೆ ಹೋಗಿದ್ದಾರೆ. ಹಬ್ಬಗಳಿಗೆ ಬೆಂಗಳೂರು, ಮೈಸೂರು ಸೇರಿ ಇತರ ನಗರದ ಜನ ಹಳ್ಳಿಗಳಿಗೆ ಬಂದಿದ್ದಾರೆ‌. ಈ ವೇಳೆ ಕೊರೊನಾ ಹರಡಿರುವ ಸಾಧ್ಯತ ಹೆಚ್ಚಿದೆ. ಸರ್ಕಾರದ ಆದೇಶವನ್ನು ಜನ ಪಾಲಿಸಬೇಕು. ಇಲ್ಲವಾದಲ್ಲಿ ಮತ್ತಷ್ಟು ಆತಂಕ ಎದುರಾಗಲಿದೆ ಎಂದು ಎಚ್ಚರಿಸಿದರು.

ABOUT THE AUTHOR

...view details