ನಡುರಸ್ತೆಯಲ್ಲಿ ಸೋಂಕಿತನ ಅವಾಂತರ, ಅಧಿಕಾರಿಗಳಿಗೆ ಸತಾಯಿಸಿದ ವೃದ್ಧ!! - ಅರಕಲಗೂಡು ಕೊರೊನಾ ಸೋಂಕಿತನ ಅವಾಂತರ
ಸ್ವಯಂ ಪ್ರೇರಿತವಾಗಿ ಕೊರೊನಾ ಪರೀಕ್ಷೆಗೊಳಪಟ್ಟಿದ್ದ ವೃದ್ಧನೊಬ್ಬನ ವರದಿ ಪಾಸಿಟಿವ್ ಬಂದ ಹಿನ್ನೆಲೆ ಆಸ್ಪತ್ರೆಗೆ ಹೋಗಲು ನಿರಾಕರಿಸಿ ನಡುರಸ್ತೆಯಲ್ಲಿಯೇ ಅವಾಂತರ ಸೃಷ್ಟಿಸಿದ ಘಟನೆ ಹಾಸನ ಜಿಲ್ಲೆಯ ಅರಕಲಗೂಡು ಪಟ್ಟಣದ ಅನಕೃ ವೃತ್ತದಲ್ಲಿ ಜರುಗಿದೆ. ನನಗೆ ಪಾಸಿಟಿವ್ ಬಂದಿಲ್ಲ, ನಾನ್ ಬರಲ್ಲ. ಬೇಕಿದ್ರೆ ಕೋರ್ಟ್ನಿಂದ ನೋಟಿಸ್ ನೀಡಿ ಎಂದು ಹಠ ಹಿಡಿದು ಸಂಚಾರಕ್ಕೆ ಅಡ್ಡಿಮಾಡಿ ಆರೋಗ್ಯ ಅಧಿಕಾರಿಗಳನ್ನು ಸತಾಯಿಸಿದ್ದಾನೆ.