ಮೊದಲ ಅಲೆ ಹಿಮ್ಮೆಟ್ಟಿಸಿದ್ದ ಹಳ್ಳಿಗಳಲ್ಲಿ ಕೊರೊನಾ ಆರ್ಭಟ: ಮುಗ್ಧ ಹಳ್ಳಿಗರಲ್ಲಿ ಹೆಚ್ಚುತ್ತಿದೆ ಆತಂಕ! - karwara covid latest news
ಕೊರೊನಾ ಮೊದಲ ಅಲೆ ಕಾಲಿಟ್ಟಾಗ ಎಲ್ಲೆಡೆ ಆತಂಕ ಮನೆ ಮಾಡಿತ್ತು. ರೋಗದ ಬಗ್ಗೆ ಗಂಧಗಾಳಿಯೂ ಗೊತ್ತಿಲ್ಲದ ಅದೆಷ್ಟೋ ಹಳ್ಳಿ ಜನರಿಗೆ ಏನು ಮಾಡಬೇಕೆಂಬುದೇ ತಿಳಿದಿರಲಿಲ್ಲ. ಆದರೂ ಸರ್ಕಾರದ ಕಟ್ಟಪ್ಪಣೆಯನ್ನ ಚಾಚೂ ತಪ್ಪದೇ ಪಾಲಿಸಿ ತಮ್ಮ ಹಳ್ಳಿಗರಿಗೆ ಹೆಮ್ಮಾರಿಯ ಸೋಂಕು ತಾಗದಂತೆ ನೋಡಿಕೊಂಡಿದ್ದರು. ಆದರೆ, ಈ ಬಾರಿ 2ನೇ ಅಲೆಯಿಂದಾಗಿ ಇಲ್ಲೊಂದು ತಾಲೂಕಿನ ಕುಗ್ರಾಮಗಳ ಜನರು ನಿತ್ಯವೂ ಸೋಂಕಿಗೆ ತುತ್ತಾಗುತ್ತಿದ್ದು, ಇದೀಗ ಹಳ್ಳಿಗರಲ್ಲಿ ಇನ್ನಿಲ್ಲದ ಆತಂಕ ಮೂಡಿದೆ.