ಕರ್ನಾಟಕ

karnataka

ETV Bharat / videos

ಕೊರೊನಾ ತಡೆಗಟ್ಟಲು ಮತ್ತೆ ಲಾಕ್​ಡೌನ್​ ಅವಶ್ಯ: ಹುಬ್ಬಳ್ಳಿ ಮಂದಿ ಅಭಿಮತ - ಧಾರವಾಡ ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು

By

Published : Jun 30, 2020, 10:29 PM IST

ಹುಬ್ಬಳ್ಳಿ: ದಿನದಿಂದ ದಿನಕ್ಕೆ ಜಿಲ್ಲೆಯಲ್ಲಿ ಕೊರೊನಾ ಅಟ್ಟಹಾಸ ಮೆರೆಯುತ್ತಿದ್ದು, ಜನರಲ್ಲಿ ಆತಂಕ ಮನೆ ಮಾಡಿದೆ. ರಾಜ್ಯ ಸರ್ಕಾರ ಈಗಿನ ಪರಿಸ್ಥಿತಿಯಲ್ಲಿ ಲಾಕ್​ಡೌನ್ ಮಾಡುವಂತೆ ಸಾರ್ವಜನಿಕರು ಮನವಿ ಮಾಡಿದ್ದಾರೆ. ದಿನದಿಂದ ದಿನಕ್ಕೆ ಕೊರೊನಾ ಸಿಟಿ ಅಷ್ಟೇ ಅಲ್ಲದೆ ಹಳ್ಳಿಗಳಿಗೂ ಒಕ್ಕರಿಸಿದ ಪರಿಣಾಮ ಜನರು ಭಯಬೀತರಾಗಿದ್ದಾರೆ. ಈಗ ಲಾಕ್​ಡೌನ್​ ಜಾರಿಗೆ ತಂದರೆ ಕೊರೊನಾದಿಂದ ಮುಕ್ತವಾಗಬಹುದು. ಇಲ್ಲವಾದರೆ ಮುಂದೆ ಬಹಳ ಸಂಕಷ್ಟ ಎದರಾಗುತ್ತದೆ‌‌ ಎನ್ನುತ್ತಾರೆ ಹುಬ್ಬಳ್ಳಿ ಜನತೆ. ಕೆಲವರು ಕೊರೊನಾ ವಿರುದ್ಧ ಹೋರಾಟಕ್ಕೆ ಲಾಕ್​ಡೌನ್ ಒಂದೇ ಅಸ್ತ್ರವಲ್ಲ, ದೇಶದ ಆರ್ಥಿಕ ಸ್ಥಿತಿ ತುಂಬಾ ಹದಗೆಟ್ಟಿದೆ. ಸಾರ್ವಜನಿಕರು ಸಹ ಕೊರೊನಾ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ABOUT THE AUTHOR

...view details