ಕೊರೊನಾ ಎಮರ್ಜೆನ್ಸಿ: ಕೊಪ್ಪಳದಲ್ಲಿ ಹೋಟೆಲ್ಗಳು ಬಂದ್ - Koppal
ಕೊಪ್ಪಳ: ಕೊರೊನಾ ಎಮರ್ಜೆನ್ಸಿ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಕೊಪ್ಪಳದಲ್ಲಿ ಜಿಲ್ಲಾಡಳಿತ ಹೋಟೆಲ್ಗಳನ್ನ ಬಂದ್ ಮಾಡಿಸಿದ್ದರಿಂದ, ಹೋಟೆಲ್ ಮಾಲೀಕರು ಒಂದು ದಿನದ ಮಟ್ಟಿಗೆ ಹೋಟೆಲ್ ನಡೆಸಲು ಅವಕಾಶ ನೀಡುವಂತೆ ಡಿಸಿ ಅವರನ್ನು ಭೇಟಿ ಮನವಿ ಮಾಡಿದರು. ಇದೇ ವೇಳೆ ಡಿಸಿ ಸಾರ್ವಜನಿಕರ ಹಿತದೃಷ್ಠಿಯಿಂದ ಜಿಲ್ಲಾಡಳಿತ ಕೈಗೊಂಡ ಆದೇಶವನ್ನು ಪಾಲಿಸಬೇಕು ಎಂದು ಹೋಟೆಲ್ ಮಾಲೀಕರಿಗೆ ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್ ಖಡಕ್ ಸೂಚನೆ ನೀಡಿ, ಹೋಟೆಲ್ಗಳನ್ನು ಬಂದ್ ಮಾಡುವಂತೆ ಸೂಚಿಸಿದರು.