ಕೊರೊನಾ ಎಫೆಕ್ಟ್: ಬೇರೆ ಜಿಲ್ಲೆ, ರಾಜ್ಯ, ವಿದೇಶಗಳಿಂದ ಬರುವ ಜನರಿಗೆ ನಿಷೇಧ ಹೇರಿದ ಗ್ರಾಮಸ್ಥರು - ಚಿತ್ರದುರ್ಗದಲ್ಲಿ ಕೊರೊನಾ ಎಫೆಕ್ಟ್
ಚಿತ್ರದುರ್ಗ: ಬೇರೆ ಜಿಲ್ಲೆ, ರಾಜ್ಯ, ವಿದೇಶಗಳಿಂದ ಬರುವ ಜನರು ಗ್ರಾಮವನ್ನು ಪ್ರವೇಶಿಸಿದಂತೆ ಗ್ರಾಮಸ್ಥರು ಬೇಲಿ ಹಾಕಿ ನಿಷೇಧ ಹೇರಿರುವ ಘಟನೆ ಜಿಲ್ಲೆ ಹೊಸದುರ್ಗ ತಾಲ್ಲೂಕಿನ ಶ್ರೀರಂಗಾಪುರದಲ್ಲಿ ನಡೆದಿದೆ. ದೇಶಾದ್ಯಂತ ಲಾಕ್ಡೌನ್ಗೆ ಗ್ರಾಮಸ್ಥರಿಂದ ಬೆಂಬಲ ವ್ಯಕ್ತವಾಗಿದ್ದು, ಕೊರೊನಾ ಹರಡದಂತೆ ಕಡಿವಾಣ ಹಾಕಲು ಗ್ರಾಮಸ್ಥರು ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದಾರೆ. ಗ್ರಾಮದಲ್ಲಿ ಐದು ಜನಕ್ಕಿಂತ ಹೆಚ್ಚು ಗುಂಪು ಸೇರದಂತೆ ಭಿತ್ತಿಪತ್ರ,ಬ್ಯಾನರ್ ಹಾಕಿ ಜಾಗೃತಿ ಮೂಡಿಸುತ್ತಿದ್ದು, ಗ್ರಾಮದ ಪ್ರವೇಶದ್ವಾರದಲ್ಲೇ ಬ್ಯಾನರ್, ಬಿತ್ತಿಪತ್ರ ಅಂಟಿಸಿ ಮಾಹಿತಿ ನೀಡುತ್ತಿದ್ದಾರೆ.