ಬಟ್ಟೆ ತೊಳೆದು, ಐರನ್ ಮಾಡಿ ಜಿವನ ನಡೆಸುತ್ತಿದ್ದವರ ಜೀವನಕ್ಕೆ ಅಡ್ಡಿಯಾಯಿತು ಕೊರೊನಾ - ಹಾಸನ ಕೊರೊನಾ ಸುದ್ದಿ
ಹಾಸನ: ಕೊರೊನಾದಿಂದ ಸಂಕಷ್ಟದಲ್ಲಿ ಸಿಲುಕಿರುವ ವೃತ್ತಿ ನಿರತ ಕಾರ್ಮಿಕರಿಗೆ ಸರ್ಕಾರ ಕೋವಿಡ್ ಪ್ಯಾಕೇಜ್ ಘೋಷಣೆ ಮಾಡಿದೆ. ಆದರೆ ಸರ್ಕಾರ ಹಣ ಬಿಡುಗಡೆ ಮಾಡಿದ್ದರೂ ಕೂಡ, ಬಹುತೇಕ ಮಂದಿಗೆ ಅದು ಇನ್ನೂ ತಲುಪಿಲ್ಲ. ತಲುಪದೇ ಇರುವುದು ಅನುಮಾನ ಮೂಡಿಸಿದೆ. ಇನ್ನು, ಡ್ರೈ ಕ್ಲೀನರ್ ಮತ್ತು ಲಾಂಡ್ರಿ ಕೆಲಸ ಮಾಡುತ್ತಿರುವ ಜನರ ಬದುಕು ಸಹ ಸಂಕಷ್ಟಕ್ಕೆ ಸಿಲುಕಿದ್ದು, ಅವರು ಈಟಿವಿ ಭಾರತದೊಂದಿಗೆ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.